Select Your Language

Notifications

webdunia
webdunia
webdunia
webdunia

ಗುರುಪ್ರಸಾದ್ ಸಿನಿಮಾಗೆ ಯೂಟ್ಯೂಬಲ್ಲಿ ಭರ್ಜರಿ ರೆಸ್ಪಾನ್ಸ್

ಗುರುಪ್ರಸಾದ್ ಸಿನಿಮಾಗೆ ಯೂಟ್ಯೂಬಲ್ಲಿ ಭರ್ಜರಿ ರೆಸ್ಪಾನ್ಸ್
Bangalore , ಬುಧವಾರ, 18 ಜನವರಿ 2017 (13:10 IST)
ಸಾಕಷ್ಟು ಗ್ಯಾಪ್ ಬಳಿಕ ಮಠ ಗುರುಪ್ರಸಾದ್ ಆಕ್ಷನ್ ಕಟ್‌ಗೆ ಮರಳಿರುವ ಸಿನಿಮಾ ಎರಡನೇ ಸಲ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಯೂಟ್ಯೂಬಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 
 
ಇದುವರೆಗೂ ಈ ಚಿತ್ರದ ಟ್ರೇಲರನ್ನು ಎರಡು ಲಕ್ಷಕ್ಕೂ ಅಧಿಕ ಸಲ ವೀಕ್ಷಿಸಲಾಗಿದೆ. ಡೈರೆಕ್ಟರ್ಸ್ ಸ್ಪೆಷಲ್ ನಿರ್ದೇಶನದ ಬಳಿಕ ಗುರುಪ್ರಸಾದ್ ಸೈಲೆಂಟ್ ಆಗಿದ್ದರು. ಈಗ ಎರಡನೇ ಸಲ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‍ವುಡ್‌ನಲ್ಲಿ ಹೊಸ ವರಸೆ ತೋರಿಸಲು ರೆಡಿಯಾಗಿದ್ದಾರೆ.
 
ಧನಂಜಯ್ ಮತ್ತು ಸಂಗೀತಾ ಭಟ್ ಅಭಿನಯದ ಈ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.  ಈ ಚಿತ್ರದ ಬಗ್ಗೆ ಧನಂಜಯ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಹಿರಿಯ ನಟಿ ಲಕ್ಷ್ಮಿ ಅವರು ಅಭಿನಯಿಸಿರುವುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ ಲೀಡರ್ ಚಿತ್ರದಲ್ಲಿ ನಟಿ ಬಿಪಾಶಾ ಬಸು