Select Your Language

Notifications

webdunia
webdunia
webdunia
webdunia

ಸಂಜು ವೆಡ್ಸ್ ಗೀತ 2 ರಲ್ಲಿ ನಾನಿಲ್ಲ..ನಾನು ನಟಿಸುತ್ತಿಲ್ಲ- ಕೀರ್ತಿ ಕರಬಂಧ !

ಸಂಜು ವೆಡ್ಸ್ ಗೀತ 2  ರಲ್ಲಿ ನಾನಿಲ್ಲ..ನಾನು ನಟಿಸುತ್ತಿಲ್ಲ- ಕೀರ್ತಿ ಕರಬಂಧ !
ಬೆಂಗಳೂರು , ಗುರುವಾರ, 31 ಜುಲೈ 2014 (09:50 IST)
ನಿನ್ನೆ ನಾವು ಸಂಜು ವೆಡ್ಸ್ ಗೀತ್ ಚಿತ್ರದ  ಭಾಗ ಎರಡರಲ್ಲಿ ಈಗಿನ ಹೆಚ್ಚು ಚಾಲ್ತಿ ಯಲ್ಲಿರುವ ನಟಿ ಕೀರ್ತಿ ಕರಬಂಧ ನಟಿಸುತ್ತಿದ್ದಾರೆ  ಎಂದು ಹೇಳಿದ್ದೆವು. ಆದರೆ ಇಂದು ಆ ಸುದ್ದಿಯಲ್ಲಿ ಬದಲಾವಣೆ ಕಂಡು ಬಂದಿದೆ. ನಿರ್ದೇಶಕ ನಟ ನಾಗಶೇಖರ್ ಅವರಿಗೆ ಜೀವದಾನ ಮಾಡಿದ ಚಿತ್ರ ಸಂಜು ವೆಡ್ಸ್ ಗೀತ. 
 
ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯ ನಟಿಸಿದ್ದರು ಈ ಸಿನಿಮಾದ ಅಂತಿಮ ಭಾಗದಲ್ಲಿ ರಮ್ಯ ಒಂದು ಮಗುವಿಗೆ ಜನ್ಮ  ನೀಡುತ್ತಾರೆ ಆ ಮಗು ಅಂಧ ಮಗು ಅದರ ಕಥೆ ಭಾಗ2  ರಲ್ಲಿ ಮುಂದುವರೆಯುತ್ತದೆ. ಕೀರ್ತಿ ಕರಬಂಧ ಮಗಳ ಪಾತ್ರ ಮಾಡುತ್ತಾರೆ ಎನ್ನುವ ಮಾತನ್ನು ಮಾಧ್ಯಮಗಳ ಮುಂದೆ ಹೇಳಿದ್ದರು ನಾಗ್ ಶೇಖರ್. 
 
......ಇನ್ನು ಇದೆ. ಮುಂದೆ ಓದಿ 
 
 

ಆದರೆ ... ಆದರೆ ಈಗ ಕೀರ್ತಿ ತಾನು ಆ ಪಾತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಮಾತು ಹೇಳುವುದರ ಮುಖಾಂತರ ಎಲ್ಲರೂ ಆಕೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.ಅವರು  ಹೇಳಿರೋದಿಷ್ಟೇ.. ನಾನು ಆ ಕಥೆ ಕೇಳಿದೆ, ತುಂಬಾ   ಚಂದದ ಕಥೆ, ಆದರೆ ನಾನು ಈ ಚಿತ್ರದಲ್ಲಿ ನಟಿಸುವುದಕ್ಕೆ ಸಮ್ಮತಿ ನೀಡಿಲ್ಲ. 
 
ಯಾವ ಒಪ್ಪಿಲ್ಲವೋ ಆಗ ಹೊರ ಬಂದೆ ಎಂದು ಹೇಳುವ ಮಾತಿಗೆ ಅರ್ಥ ಇಲ್ಲ ಎಂದು ತಿಳಿಸಿದ್ದಾರೆ.ನಾನು ಚಿತ್ರದಲ್ಲಿ ನಟಿಸಿರುವ ಸಂಗತಿ ಇದ್ರೆ ತಕ್ಷಣ ತಿಳಿಸುತ್ತೇನೆ, ಸುಮ್ಮನೆ ಜನರು ಹರಡುವ ಸುದ್ದಿಗಳಿಗೆ ಆದ್ಯತೆ ನೀಡ ಬೇಡಿ ಎಂದು ನಗುತ್ತ  ಟ್ವೀಟ್ ಮಾಡಿದ್ದಾರೆ ಆಕೆ. ಆದರೂ ನಿನ್ನೆ ಇದ್ದ ಸುದ್ದಿ ಇಂದು ಬದಲಾದದ್ದು ಯಾಕೆ ಮತ್ತು ಯಾಕಾಗಿ ?? 

Share this Story:

Follow Webdunia kannada