Select Your Language

Notifications

webdunia
webdunia
webdunia
webdunia

ಮೊಹಬ್ಬತ್ ತೆರೆಗೆ ಸಿದ್ಧ

ಮೊಹಬ್ಬತ್ ತೆರೆಗೆ ಸಿದ್ಧ
, ಗುರುವಾರ, 27 ಆಗಸ್ಟ್ 2015 (09:54 IST)
ಲವ್ಲಿ ಸ್ಟಾರ್  ಪ್ರೇಂ ನಟನೆಯ ಬಹು ನಿರೀಕ್ಷಿತ ಚಿತ್ರ ಮಸ್ತ್ ಮೊಹಬತ್. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬ್ಯುಸಿಯಾಗಿರೋ ಪ್ರೇಮ್ ರ ಮಸ್ತ್ ಮೊಹಬ್ಬತ್ ಚಿತ್ರ ಈಗ ತೆರೆಗೆ ಬರಲು ಸಿದ್ಧವಾಗಿದೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರೋ ಮಸ್ತ್ ಮೊಹಬ್ಬತ್ ಈಗ ತೆರೆಗೆ ಬರಲು ದಿನಗಣನೆ ಶುರುಮಾಡಿದೆ. ನಿರ್ದೇಶಕ ಮೋಹನ್ ಮಾಳಗಿಗೆ ಚೊಚ್ಚಲ ಚಿತ್ರ ಇದಾಗಿದ್ದು, ಅಚ್ಚುಕಟ್ಟಾಗಿ ಕಥೆಯನ್ನ ಪೋಣಿಸಿ ಪ್ರೇಕ್ಷಕರೆದುರು ಇಡಲು ಮುಂದಾಗಿದ್ದಾರೆ. 
    
ಮಸ್ತ್ ಮೊಹಬ್ಬತ್ ಮ್ಯೂಸಿಕಲ್ ಓರಿಯೆಂಟೆಡ್ ಮೂವಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಚಿತ್ರದಲ್ಲಿ 8 ಹಾಡುಗಳಿವೆ.  ಜಯಂತಕಾಯ್ಕಿಣಿ ಹಾಗೂ ಕವಿರಾಜ್ ಗೀತರಚನೆ ಮಾಡಿದ್ದಾರೆ. ಈ ಸ್ಪೆಷಲ್ ಹಾಡುಗಳನ್ನ ಸಾಕಷ್ಟು ಅದ್ದೂರಿಯಾಗಿ, ಡಿಫರೆಂಟ್ ಆಗಿ ವಿಜಯ್.ಸಿ.ಕುಮಾರ್ ಅವರು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೆ ಮನೋಮೂರ್ತಿ ಚಿತ್ರದ ಎಂಟು ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 
      
ಗೌಸ್ ಪೀರ್ 'ಮಸ್ತ್ ಮೊಹಬತ್ 'ಗೆ ಸಂಭಾಷಣೆ ಬರೆದರೆ, ಈಶ್ವರ್ ಸಂಕಲನ ಚಿತ್ರಕ್ಕೆ ಕತ್ತರಿಯಾಡಿಸಿದ್ದಾರೆ. ಪೂನಂ, ನವೀನ್ ಕೃಷ್ಣ, ರಾಜುತಾಳಿಕೋಟೆ, ಸಾಧುಕೋಕಿಲ, ಸ್ವಯಂವರ ಚಂದ್ರು, ಅಶ್ವಿನ್, ಅರ್ಚನ, ಶಕಿಲಾ, ಚಿಕ್ಕಣ್ಣ ಇನ್ನು ಅನೇಕರು ನೆನಪಿರಲಿ ಪ್ರೇಂ ಜೊತೆ ಮೊಹಬ್ಬತ್ ಮಾಡಲು ರೆಡಿಯಾಗಿದ್ದಾರೆ. ಶೀಘ್ರದಲ್ಲಿ ಆಡಿಯೋ ಲಾಂಚ್ ಮಾಡಿ ಆದಷ್ಟು ಬೇಗ ಚಿತ್ರರಸಿಕರಿಗೆ ರಸದೌತಣ ನೀಡಲು ಚಿತ್ರತಂಡ ಕಾಯ್ತಿದೆ. 

Share this Story:

Follow Webdunia kannada