Select Your Language

Notifications

webdunia
webdunia
webdunia
webdunia

ಪುರುಷರು ಹೆಣ್ಣು ಹಿಡಿತದಲ್ಲಿ ಇರಬೇಕೆಂದು ಬಯಸುತ್ತಾರೆ: ಶೃತಿ ಹಾಸನ್

ಪುರುಷರು ಹೆಣ್ಣು ಹಿಡಿತದಲ್ಲಿ ಇರಬೇಕೆಂದು ಬಯಸುತ್ತಾರೆ: ಶೃತಿ ಹಾಸನ್
, ಬುಧವಾರ, 22 ಅಕ್ಟೋಬರ್ 2014 (12:22 IST)
ಶ್ರುತಿ ಹಾಸನ್ ತನ್ನ ತಂದೆ ಕಮಲ್ ಹಾಸನ್ ಅವರಂತೆ ಮನದಲ್ಲಿ ಇದ್ದ ಮಾತನ್ನು ಮುಲಾಜಿಲ್ಲದೆ ಹೊರ ಹಾಕ್ತಾಳೆ. ಆ ರೀತಿ ಹೊರ ಹಾಕಿದ ಮತ್ತೊಂದು ಸಂಗತಿ ಈಗ ಹೊರ ಬಂದು. ಅದು ಈಗ ಮಾಧ್ಯಮಗಳ ಹಾಟ್ ಟಾಪಿಕ್ ಆಗಿ ಬದಲಾಗಿದೆ ಎಂದೇ ಹೇಳಬಹುದಾಗಿದೆ. 
 
ಶ್ರುತಿ ಹಾಸನ್ ಹೇಳುವುದಿಷ್ಟೇ ಭಾರತದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ. ಅದರಲ್ಲೂ ಪುರುಶರರು ತಮ್ಮ ಅಡಿಯಲ್ಲಿ ತಗ್ಗಿ ಬಗ್ಗಿ ನಡೆಯ ಬೇಕು ಎಂದು ಬಯಸುತ್ತಾರೆ. ಇಲ್ಲಿ ಕೇವಲ ವಯಸ್ಸಿರುವ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಬಾಲಕಿಯರು , ವೃದ್ಧ ಹೆಣ್ಣುಮಕ್ಕಳಿಗೂ ಸಹಿತ ಯಾವುದೇ ರೀತಿಯಿಂದಲೂ ರಕ್ಷಣೆ ಇಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಗಂಡಸರು ಸದಾ ಹೆಣ್ಣು ತನ್ನ ಹಿಡಿತದಲ್ಲೇ ಇರ ಬೇಕು ಎನ್ನುವ ಮನೋಭಾವ ಹೊಂದಿರುತ್ತಾರೆ. 
 
ಆದರೆ ಹಾಗೆ ಯಾಕೆ ಇರ ಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾಳೆ. ಹೆಣ್ಣು ಒಬ್ಬೊಂಟಿಯಾಗಿ ಹೋಟೆಲ್, ಗೆಸ್ಟ್ ಹೌಸ್‌ನಲ್ಲಿ ಇರುವಂತಹ ವಾತಾವರಣ ಭಾರತದಲ್ಲಿ ಇಲ್ಲ. ಯಾವುದೇ ವೃತ್ತಿ ಆಗಿರಲಿ ಹೆಣ್ಣಿಗೆ  ಸಮಾನ ಸ್ಥಾನಮಾನ ಇಲ್ಲ. ಆಕೆ ಪತ್ರಕರ್ತೆ, ಉನ್ನತ ಅಧಿಕಾರಿ, ಟೀಚರ್, ಗೃಹಿಣಿ ಯಾರೇ ಆಗಿರಲಿ ಆಕೆಯು ಪುರುಷರ ಅಧೀನದಲ್ಲೆ ಇರಬೇಕಾದ ಪರಿಸ್ಥಿತಿ ಇದೆ ಭಾರತದಲ್ಲಿ. ಹೆಣ್ಣಿಗೆ ಇಲ್ಲಿ ಸರಿಯಾದ ರಕ್ಷಣೆ ಇಲ್ಲ ಎಂದು ತನ್ನ ಮನದಲ್ಲಿ ಇದ್ದುದನ್ನು ಹೊರಗೆ ಹಾಕಿದ್ದಾಳೆ.
 
ಆದರೆ ತಾನು ಸದಾ ಎಕ್ಸ್ ಪೋಸ್ ಮಾಡಿಕೊಂಡು  ಹೀರೋಗಳ ಜೊತೆ ಐಟಂ ನಂಬರ್ ಮೂಲಕವೂ  ನಟಿಸುತ್ತಿರುವ ಶ್ರುತಿಗೆ ಯಾಕೆ ಈ ಪರಿಯ ಕೋಪ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿದೆ. ಆಕೆ ಹೇಳುವ ಮಾತುಗಳು ಸತ್ಯ ಎಂದು ಗೊತ್ತಿದ್ದರು ಸಹಿತ ಈ ಬಗ್ಗೆ ಎಲ್ಲರು ಚರ್ಚೆ ಮಾಡುತ್ತಿದ್ದಾರಂತೆ ! ಯಾಕೆಂದ್ರೆ ಆಕೆಯ ಮನೋಭಾವ ಎಲ್ಲರಿಗೂ ಶಾಕ್ ಉಂಟು ಮಾಡಿದೆಯಂತೆ. ಒಟ್ಟಾರೆ ಸದಾ ಸುದ್ದಿಯಲ್ಲಿ ಇರುವ ಪೈಕಿ ಶ್ರುತಿ ಹಾಸನ್.
 

Share this Story:

Follow Webdunia kannada