Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರರಂಗದ ಬಹು ಭರವಸೆಯ ನಟಿ ಮೇಘನ ರಾಜ್

ಕನ್ನಡ ಚಿತ್ರರಂಗದ ಬಹು ಭರವಸೆಯ ನಟಿ ಮೇಘನ ರಾಜ್
, ಬುಧವಾರ, 22 ಅಕ್ಟೋಬರ್ 2014 (10:39 IST)
ಸ್ಯಾಂಡಲ್ ವುಡ್‌ ನ ಭರವಸೆಯ ನಟಿ ಮೇಘನ ರಾಜ್. ಈಗ ಆಕೆ ತನ್ನ ಹೊಸ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರ ಜೊತೆ ನಟಿಸುತ್ತಿದ್ದಾಳೆ. ಈ ಜೋಡಿಯ ಹೊಚ್ಚ ಹೊಸ ಚಿತ್ರದ ಹೆಸರು ವಂಶೋದ್ಧಾರಕ. ಚಿತ್ರವನ್ನು ಚಿಕ್ಕಣ್ಣ ನಿರ್ದೇಶಿಸುತ್ತಿದ್ದಾರೆ. ಗ್ರಾಮೀಣ   ಬದುಕಿನ ಹಿನ್ನೆಲೆಯ ಕಥೆಯನ್ನು ಇದು ಒಳಗೊಂಡಿದೆ. ಸಧ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. 

ನಟಿ ಮೇಘನ ರಾಜ್ ಯಶ್ ಜೊತೆ ನಟಿಸಿದ ರಾಜಹುಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಅದಾದ ಬಳಿಕ ಆಕೆ ಶ್ರೀನಗರ್ ಕಿಟ್ಟಿ ಜೊತೆ ಬಹುಪರಾಕ್ ಚಿತ್ರದಲ್ಲಿ ನಟಿಸಿ, ಬಳಿಕ ಎರಡು ಸಿನಿಮಾಗಳಲ್ಲಿ ನಟಿಸಲು ಸಹಿ ಹಾಕಿದ್ದಾಳೆ ಈ ಚೆಲುವೆ. ಒಂದು ಅಲ್ಲಮ ಹಾಗೂ ಮತ್ತೊಂದು ವಂಶೋದ್ಧಾರಕ. ಅಲ್ಲಮ  ಚಿತ್ರದಲ್ಲಿ ರಾಜ ನರ್ತಕಿಯ ಪಾತ್ರಧಾರಿ ಆಗಿದ್ದಾಳೆ ಈ ಭಾಮೆ. 
 
ಈಗ ವಂಶೋದ್ಧಾರಕದಲ್ಲಿ ಅಭಿನಯಿಸಲು ಸಿದ್ಧತೆ ನಡೆಸಿರುವ ಮೇಘನ ಹಾಗೂ ವಿಜಯ್ ರಾಘವೇಂದ್ರ ಅವರ ಕೆಮಿಸ್ಟ್ರಿ ಯಾವ ರೀತಿ ಇದೆ ಎನ್ನುವುದನ್ನು ನೋಡುವ ಕುತೂಹಲ ಎಲ್ಲರಿಗಿದೆ. ಈ ಚಿತ್ರಕ್ಕೆ ಪಿಕೆ ಹೆಚ್ ದಾಸ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿ ಮನೋಹರ್ ಸಂಗೀತವಿದೆ. 
 
ಪ್ರಸ್ತುತ ಟಿ ಎಸ್ ನಾಗಾಭರಣ ಅವರ ನಿರ್ದೇಶನದ ಚಿತ್ರ ಅಲ್ಲಮದಲ್ಲಿ ಬ್ಯುಸಿ ಆಗಿದ್ದಾಳೆ ಮೇಘು.. ಡೈರೆಕ್ಟರ್ ಸ್ಪೆಶಲ್ ನ ಮುಖ್ಯ ಪಾತ್ರಧಾರಿ ಆಗಿದ್ದ ಧನಂಜಯ್ ಅಲ್ಲಮದಲ್ಲಿ ಲೀಡ್ ರೋಲ್ ನಲ್ಲಿ ಇದ್ದಾರೆ. 

Share this Story:

Follow Webdunia kannada