Select Your Language

Notifications

webdunia
webdunia
webdunia
webdunia

ಮೇಘನಾ ರಾಜ್ ಇಡಿ ರಾತ್ರಿ ಎದ್ದಿದ್ದು ಯಾಕೆ ಗೊತ್ತೇ ?

ಮೇಘನಾ ರಾಜ್  ಇಡಿ ರಾತ್ರಿ ಎದ್ದಿದ್ದು ಯಾಕೆ ಗೊತ್ತೇ ?
, ಶುಕ್ರವಾರ, 25 ಏಪ್ರಿಲ್ 2014 (09:48 IST)
ಕನ್ನಡ ಮುದ್ದಾದ ನಟಿಯರಲ್ಲಿ ಮೇಘನ ರಾಜ್ ಸಹ ಒಬ್ಬಳು. ಆಕೆಯು ಯಶ್ ನಟನೆಯ ರಾಜಾಹುಲಿಯಲ್ಲಿ ನಟಿಸಿ ಯಶಸ್ವಿ ನಟಿ ಅನ್ನುವ ಅಗ್ಗಳಿಕೆ ಪಡೆದಳು, ಅದೀಗ ಹಳೆಯ ಸುದ್ದಿ. ಅದಲ್ಲದೆ ಶ್ರೀನಗರ ಕಿಟ್ಟಿ ಜೊತೆ ಬಹುಪರಾಕ್ ಚಿತ್ರದಲ್ಲಿ ಸಹ ನಟಿಸುತ್ತಿದ್ದಾಳೆ ಈ ಚೆಲುವೆ.ಜೊತೆಗೆ ಒಂದಂಷ್ಟು  ಒಳ್ಳೆಯ ಅವಕಾಶಗಳು ಸಹಿತ ತಮಿಳು ಚಿತ್ರರಂಗದಿಂದ ಆಕೆಗೆ ದೊರಕಿದೆ. ಇವೆಲ್ಲ ಒಂದು ಕಡೆ ಇಡೋದಾದರೆ ಆಕೆ ಅದ್ಯಾಕೋ ಇಡಿ ರಾತ್ರಿ ಎದ್ದಿರ್ತಾಳೆ ಅನ್ನುವುದು ಹೊಸ ಸುದ್ದಿ.
 
ಹೌದಾ ರಾತ್ರಿಯೆಲ್ಲ ಎದ್ದು ಆಕೆ ಏನ್ ಮಾಡ್ತಿರುತ್ತಾಳೆ ಎನ್ನುವ ಪ್ರಶ್ನೆ ಉಂಟಾಗುವುದು ಸಹಜ, ಆದರೆ ಆಕೆ ರಾತ್ರಿ ಎದ್ದು  ಮಾಡುವ ಕೆಲಸದ ಬಗ್ಗೆ  ಬೇರೆ ರೀತಿ ಯೋಚಿಸುವ ಅಗತ್ಯವಿಲ್ಲ. ಮೇಘನ ರಾಜ್ಯಶಾಸ್ತ್ರ ವಿದ್ಯಾರ್ಥಿನಿ. ಆಕೆಗೆ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಅದಕ್ಕಾಗಿ ತನ್ನ ಗೆಳತಿಯರ ಜೊತೆ ಸೇರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ.. ಅದರ ಸಲುವಾಗಿ ಇಡಿ ರಾತ್ರಿ ಅವರ ಮನೆಯಲ್ಲಿ ಟೀ ಕಾಫಿಗಳ ಸರಬರಾಜು ಓದುವ ಹುಡುಗೀರಿಗೆ! ಮೇಘನ ಸಿನಿಮಾದಲ್ಲಿ ತನ್ನ ಪ್ರತಿಭೆ ತೋರುವಂತೆ ಓದಿನಲ್ಲೂ ಸಹ ಮುಂದೆ.. ಆಕೆಯು   ಪರೀಕ್ಷೆಯಲ್ಲಿ ಚೆನ್ನಾಗಿ ಬರೀಲಿ..ಗುಡ್ ಲಕ್ ಮೇಘನಾ  

Share this Story:

Follow Webdunia kannada