Select Your Language

Notifications

webdunia
webdunia
webdunia
webdunia

ಮನೆಯಲ್ಲಿ ನಾನೂ ಪೂಜೆ ಮಾಡ್ತೇನೆ: ಕತ್ರಿನಾ

ಮನೆಯಲ್ಲಿ ನಾನೂ ಪೂಜೆ ಮಾಡ್ತೇನೆ: ಕತ್ರಿನಾ
, ಗುರುವಾರ, 2 ಏಪ್ರಿಲ್ 2015 (09:52 IST)
ಕತ್ರಿನಾ ಕೈಫ್ ಮುಸ್ಲೀಮ್ ಹೆಣ್ಣು ಮಗಳು ಆದರೆ ರಣಬೀರ್ ಹಿಂದೂ ಹುಡುಗ. ಬೇರೆಯವರ ವಿಷಯದಲ್ಲಿ ಆಗಿದ್ದಿದ್ದರೆ ಅದು ಗಲಾಟೆಗೆ ಕಾರಣವಾಗಿರುತ್ತಿತ್ತು. ಆದರೆ ಇವರಿಬ್ಬರು ಚಿತ್ರರಂಗದಲ್ಲಿ ಇರುವುದರಿಂದ ಮತ್ತು ಸೆಲೆಬ್ರಿಟಿಗಳು ಆದ ಕಾರಣ ಅಂತಹ ಯಾವುದೇ ಗಲಾಟೆ ಆಗುತ್ತಿಲ್ಲ. ಅಮ್ಮ ಕ್ರಿಶ್ಚಿಯನ್, ಅಪ್ಪ ಮುಸ್ಲೀಮ್ ಎರಡು ಧರ್ಮಗಳಿಗೆ ಸೇರಿದವರು ಒಟ್ಟಾಗಿ ಬದುಕುವುದು ಕಷ್ಟ ಎನ್ನುತ್ತಾರೆ ಆದರೆ ನನ್ನ ಕುಟುಂಬದಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದಿದ್ದಾಳೆ ಕತ್ರಿನಾ ಕೈಫ್. ಅವರಿಬ್ಬರ ವೈವಾಹಿಕ ಬದುಕು ಇತರರಿಗೆ ಆದರ್ಶಪ್ರಾಯವಾಗಿದೆ. 
ನಮ್ಮ ಮನೆಯಲ್ಲಿ ಧರ್ಮದ ಬಗ್ಗೆ ಎಂದಿಗೂ ಗಲಾಟೆ ಆಗಿಲ್ಲ. ನಾನು ಚರ್ಚ್, ಮಸೀದಿ ಹಾಗೂ ಹಿಂದೂ ದೇವಾಲಯಕ್ಕೂ ಹೋಗುತ್ತೇನೆ. ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿ ಒಂದು ಪೂಜಾಮಂದಿರ ಸಹ ಇದೆ. ನಾನು ಪ್ರತಿದಿನ ಪೂಜೆ ಮಾಡುವುದಿಲ್ಲ. ಆಗಾಗ ದೀಪ ಬೆಳಗುತ್ತೇನೆ.ಯಾರಾದರೂ ನೀನೇನು ದೀಪ ಬೆಳಗಿಸುತ್ತಿಯಾ ಎಂದು ಕೇಳಿದರೆ ನನಗೇನು ಅದರ ಬಗ್ಗೆ ಯಾವುದೇ ಬಗೆಯ ಅಭ್ಯಂತರವಿಲ್ಲ ಎಂದು ಹೇಳುತ್ತೇನೆ. ದೇವರೆಲ್ಲರೂ ಒಂದೇ ಎನ್ನುವ ಭಾವನೆ ನನ್ನದು. ಆದರೆ ಬೇರೆಯವರ ಅಭಿಪ್ರಾಯಗಳಲ್ಲಿ ಭಿನ್ನತೆ ಇರ ಬಹುದು. ಅವರವರ ನಂಬಿಕೆ ಅವರವರದ್ದು ಎಂದಿದ್ದಾಳೆ.

Share this Story:

Follow Webdunia kannada