Select Your Language

Notifications

webdunia
webdunia
webdunia
webdunia

ದುಬೈನಲ್ಲಿ ಮಾಸ್ಟರ್ ಪೀಸ್ ತಂಡ ಭರ್ಜರಿ ಶೂಟಿಂಗ್

ದುಬೈನಲ್ಲಿ ಮಾಸ್ಟರ್ ಪೀಸ್ ತಂಡ ಭರ್ಜರಿ ಶೂಟಿಂಗ್
, ಶುಕ್ರವಾರ, 27 ನವೆಂಬರ್ 2015 (10:37 IST)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್ ಪೀಸ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಸಿನಿಮಾದ ಸಾಂಗ್ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದೆ. ಯಶ್ ಹಾಗೂ ಶಾನ್ವಿ ನಡುವಿನ ಹಾಡನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ.

 
ಸಿನಿಮಾದಲ್ಲಿ ಯಶ್ ಅವರ ಇಂಟ್ರೋಡಕ್ಷನ್ ಸಾಂಗ್ ಹಾಗೂ ಐ ಕಾಟ್ ವೈಟ್ ಬೇಬಿ ಅನ್ನೋ ಹಾಡನ್ನು ಇಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ಅವರು ನೃತ್ಯ ಸಂಯೋಜಿಸುತ್ತಿದ್ದಾರೆ.ಎರಡು ಹಾಡುಗಳನ್ನು ಅತ್ಯಂತ ಸ್ಟೈಲಿಶ್ ಆಗಿ ಚಿತ್ರೀಕರಣ ಮಾಡಲಾಗುತ್ತಂತೆ. ಮತ್ತೊಂದು ವಿಷಯ ಅಂದ್ರೆ ಎರಡು ಹಾಡುಗಳು ತುಂಬಾನೇ ರಿಚ್ ಆಗಿ ಮೂಡಿ ಬರಲಿವೆಯಂತೆ.ಈಗಾಗಲೇ ಈ ಹಾಡುಗಳಿಗಾಗಿ ಯಶ್ ಹಾಗೂ ಶಾನ್ವಿ ತುಂಬಾ ಅಭ್ಯಾಸ ಕೂಡ ಮಾಡಿದ್ದಾರಂತೆ.
 
ಇನ್ನು ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನುಳಿದಂತೆ ಹಾಡಿಗಾಗಿ ಅತ್ಯಂತ ದುಬಾರಿ ಕಾರುಗಳನ್ನು ಬಳಕೆ ಮಾಡಿದ್ದಾರಂತೆ. ಇದೆಲ್ಲದರ ನಡುವೆಯೇ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣಕ್ಕೂ ಭರ್ಜರಿ ತಯಾರಿ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ಸೀನ್ ನ್ನು ತಮಿಳುನಾಡಿನ ಪುದುಚೇರಿಯಲ್ಲಿ ಚಿತ್ರೀಕರಿಸಲಾಗುತ್ತಂತೆ. ಸಿನಿಮಾದ ಶೂಟಿಂಗ್ ರೀತಿ ನೋಡಿದ್ರೆ ಸಿನಿಮಾ ಹಿಟ್ ಆಗೋ ಎಲ್ಲಾ ಲಕ್ಷಣ ಕಾಣುತ್ತಿದೆ.

Share this Story:

Follow Webdunia kannada