Select Your Language

Notifications

webdunia
webdunia
webdunia
webdunia

ಮಾಸ್ಟರ್ ಪೀಸ್ ವಾಲು ರೀಮೇಕ್ ಅಲ್ಲ: ಯಶ್

ಮಾಸ್ಟರ್ ಪೀಸ್ ವಾಲು ರೀಮೇಕ್ ಅಲ್ಲ: ಯಶ್
, ಮಂಗಳವಾರ, 3 ಮಾರ್ಚ್ 2015 (10:31 IST)
ಕನ್ನಡ ಸಿನಿಮಾರಂಗದಲ್ಲಿ ಈಗ ಒಳ್ಳೆಯ ಫಾರ್ಮ್ ಪಡೆದ ನಟ ಯಶ್. ಅವರ ಈಗಿನ ಚಿತ್ರ ಮಾಸ್ಟರ್ ಪೀಸ್. ಈ ಚಿತ್ರವು ತಮಿಳು ಚಿತ್ರ ವಾಲು ರೀಮೇಕ್ ಎಂದು ಈವರೆಗೂ ತಿಳಿಯಲಾಗಿತ್ತು. ತಮಿಳಿನಲ್ಲಿ ಶಿಂಬು ಹಾಗೂ ಹನ್ಸಿಕ ಅಭಿನಯದ ಚಿತ್ರ ವಾಲು ಕನ್ನಡದಲ್ಲಿ ಮಾಸ್ತರ್ ಪೀಸ್ ಆಗಿದೆ ಎಂದು ತಿಳಿಯಲಾಗಿತ್ತು. ಆದರೆ ಯಶ್ ಇದನ್ನು ಅಲ್ಲಗಳೆದಿದ್ದಾರೆ. ನಿರ್ದೇಶಕ  ವಿಜಯ್  ಅವರು ಯಶ್‌ಗಾಗಿ ಈ ಕಥೆಯನ್ನು ಯಶ್ ಅವರಿಗೆಂದು ಹಣಿದಿದ್ದರಂತೆ ಯಶ್ ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಬದಲಾವಣೆಯನ್ನು ಮಾಡಿದ್ದರಂತೆ. ಅದೇ ಚಿತ್ರ ಕಥೆ ವಾಲು ಹೆಸರಲ್ಲಿ ತಮಿಳಿನಲ್ಲಿ ವಿಜಯ್  ಆನಂತರ  ನಿರ್ದೇಶಿಸಿದ್ದರು. 
ಆದರೆ ಈ ಮೂಲಕ ಹೇಳುವುದಿಷ್ಟೇ ಆ ಕಥೆ ಮೊದಲೇ ಕೇಳಿರುವುದರಿಂದ ಇದು ರೀಮೇಕ್ ಆಗಲ್ಲ. ಕಥೆ ಅದೇ ಆದರು ಸಹಿತ ಇದು ರೀಮೇಕ್ ಅಲ್ಲ ಗೊತ್ತಾಯ್ತೆ.ಹಾಗಂತ ಯಶ್ ಹೇಳಿರೋದನ್ನು ನಾವು ನಿಮಗೆ ತಿಳಿಸಿದ್ದೇವೆ. ಅಲ್ಲದೆ ಈ ಚಿತ್ರಕ್ಕೆ ಇನ್ನು ಹೆಸರು ನೀಡಿಲ್ಲ. ಅಷ್ಟೇ ಅಲ್ಲದೆ ಮಾರ್ಚ್ 9  ರಿಂದ ಮಾಸ್ಟರ್ ಪೀಸ್ ಕೆಲಸ ಆರಂಭವಾಗುತ್ತದೆ. ಅದಾದ ಬಳಿಕ ವಿಜಯ್ ಚಿತ್ರದಲ್ಲಿ ನಟನೆ. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ಅವರ ನಿರ್ದೇಶನದ  ಚಿತ್ರ ಕೆಜಿಎಫ್ ನಲ್ಲಿ ತಾವು ಬ್ಯುಸಿ ಆಗಿರುವುದಾಗಿ ಹೇಳಿದ್ದಾರೆ ಯಶ್.

Share this Story:

Follow Webdunia kannada