Select Your Language

Notifications

webdunia
webdunia
webdunia
webdunia

'ಡ್ಯಾನ್ಸಿಂಗ್ ಸ್ಟಾರ್-2'ರಲ್ಲಿ ಮಾಸ್ಟರ್ ಆನಂದ್ ಜಯ

'ಡ್ಯಾನ್ಸಿಂಗ್ ಸ್ಟಾರ್-2'ರಲ್ಲಿ ಮಾಸ್ಟರ್ ಆನಂದ್ ಜಯ
, ಬುಧವಾರ, 24 ಜೂನ್ 2015 (10:13 IST)
ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾದ ಡ್ಯಾನ್ಸಿಂಗ್‌ ಸ್ಟಾರ್ 2 ನ ಫೈನಲ್‌ ಕಾರ್ಯಕ್ರಮ ಸೋಮವಾರ ಬಿಡದಿ ಹತ್ತಿರ ಇರುವ ಇನ್ನೋವೇಟಿವ್‌ ಫಿಲ್ಮ್ ಸಿಟಿಯಲ್ಲಿ ನಡೆಯಿತು. ರವಿಚಂದ್ರನ್‌, ಪ್ರಿಯಾಮಣಿ, ಮಯೂರಿ ಅವರ ಜಡ್ಜ್ ಮೆಂಟ್ ನಲ್ಲಿ ನಡೆದ ಈ ಕಾರ್ಯಕ್ರಮದ ಅಂತಿಮ ಸುತ್ತು ಸೋಮವಾರ ನಡೆದಿದ್ದು, ಆ ಕಾರ್ಯಕ್ರಮ ವೀಕ್ಷಿಸಲು ಅಪಾರ ಸಂಖ್ಯೆಯ ವೀಕ್ಷಕರು ಬಂದಿದ್ದರು.ಈ ಸಲದ ಡಾನ್ಸಿಂಗ್‌ ಸ್ಟಾರ್ ಪಟ್ಟವನ್ನೇರಿದ್ದು ಮಾಸ್ಟರ್ ಆನಂದ್‌.
ಡ್ಯಾನ್ಸಿಂಗ್‌ ಸ್ಟಾರ್ ಶೋ ಕಾನ್ಸೆಪ್ಟ್ ಬಿಬಿಸಿಯವರದು. ಸುಮಾರು ದೇಶಗಳಲ್ಲಿ ಈ ಕಾನ್ಸೆಪ್ಟ್ ಬಳಸಿಕೊಂಡು ಚಾನೆಲ್‌ಗ‌ಳು ಶೋ ನಡೆಸುತ್ತಿವೆ. ಬಿಬಿಸಿಯವರೆಲ್ಲಾ ಆ ಕಾರ್ಯಕ್ರಮಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿಯಲು ಎಲ್ಲಾ ಕಡೆ ವಿಚಾರಿಸುತ್ತಿರುತ್ತಾರೆ. ಹಾಗಾಗಿ ಬಿಬಿಸಿಯವರು ಇಲ್ಲಿಗೂ ಬಂದು ಸರ್ವೇ ಮಾಡಿದ್ದರು. ಜನರು ಈ ಶೋನ ಇಷ್ಟಪಟ್ಟದ್ದು ನೋಡಿ ಖುಷಿಯಾಗಿ ಸರ್ಟಿಫಿಕೇಟ್‌ ಕೊಟ್ಟು ವಾಪಸ್‌ ಹೋಗಿದ್ದಾರೆ ಎಂದಿದ್ದಾರೆ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್. 
 
ಮುಂದಿನ ವರ್ಷ ಇದೇ ಸಮಯದಲ್ಲಿ ಡ್ಯಾನ್ಸಿಂಗ್‌ ಸ್ಟಾರ್ 3 ಶುರುವಾಗಬಹುದು ಎನ್ನುವ ಸದಾಶಯ ವ್ಯಕ್ತ ಪಡಿಸಿದ್ದಾರೆ ಪರಮೇಶ್ವರ್. ಇದರ ನಡುವೆ ಕನ್ನಡ ಬಿಗ್ ಬಾಸ್ ಮೂರನೇ ಅವತರಣಿಕೆ ಸಹ ನಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಕಲರ್ಸ್ ಕನ್ನಡ. ಡ್ಯಾನ್ಸಿಂಗ್‌ ಸ್ಟಾರ್ 2ರ ಫೈನಲ್‌ ಇದೇ ತಿಂಗಳು 27 ಮತ್ತು 28ರಂದು ಪ್ರಸಾರವಾಗಲಿದೆ.

Share this Story:

Follow Webdunia kannada