Webdunia - Bharat's app for daily news and videos

Install App

ಮಸ್ತ್ ಮೊಹಬ್ಬತ್ ಸಿನಿಮಾದ ಆಡಿಯೋ ಲಾಂಚ್

Webdunia
ಶನಿವಾರ, 29 ಆಗಸ್ಟ್ 2015 (10:37 IST)
ಲವ್ಲಿ ಸ್ಟಾರ್  ಪ್ರೇಂ ನಟನೆಯ ಬಹು ನಿರೀಕ್ಷಿತ ಚಿತ್ರ ಮಸ್ತ್ ಮೊಹಬತ್ ಬಗ್ಗೆ ನಾವಿಗಾಗ್ಲೇ ಹೇಳಿದ್ದೀವಿ. ಇದೀಗ ಅಪ್ ಡೇಟ್ ಸುದ್ದಿ ಅಂದ್ರೆ ಮಸ್ತ್ ಮೊಹಬ್ಬತ್ ಚಿತ್ರ ಟ್ರೈಲರ್ ಅಂಡ್ ಆಡಿಯೋ ಲಾಂಚ್ ಮಾಡಿದೆ. ಜ್ಞಾನಜ್ಯೋತಿ ಸಂಭಾಗಣದಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ತಾರೆಯರ ದಂಡೇ ನೆರೆದಿತ್ತು. ಶರಣ್ , ಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ರು. ಜ್ಯೋತಿಷಿ ಮತ್ತು ವಾಸ್ತುಶಾಸ್ತ್ರಜ್ಞ ಸಚ್ಚಿದಾನಂದ ಬಾಬು ಆಡಿಯೋ ಲಾಂಚ್ ಮಾಡಿದ್ರು. ತೆಲುಗು ಸಿನಿಮಾ ಮಾದರಿಯಲ್ಲಿ ಆಡಿಯೋ ಲಾಂಚ್ ಮಾಡಿದ್ದು ವಿಶೇಷವಾಗಿತ್ತು.    

ಮಸ್ತ್ ಮೊಹಬ್ಬತ್ ನವಿರಾದ ಪ್ರೇಮಕಥೆ ಹೊಂದಿರೋ ಸಿನಿಮಾ. ಅದ್ರಲ್ಲೂ ಮ್ಯೂಸಿಕಲ್ ಓರಿಯೆಂಟೆಡ್ ಮೂವಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಚಿತ್ರದಲ್ಲಿ 8 ಹಾಡುಗಳಿವೆ.  ಜಯಂತಕಾಯ್ಕಿಣಿ ಹಾಗೂ ಕವಿರಾಜ್ ಗೀತರಚನೆ ಮಾಡಿದ್ದಾರೆ. ಈ ಸ್ಪೆಷಲ್ ಹಾಡುಗಳನ್ನ ಸಾಕಷ್ಟು ಅದ್ದೂರಿಯಾಗಿ, ಡಿಫರೆಂಟ್ ಆಗಿ ವಿಜಯ್.ಸಿ.ಕುಮಾರ್ ಅವರು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೆ ಮನೋಮೂರ್ತಿ ಚಿತ್ರದ ಎಂಟು ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 
      
ಜ್ಞಾನಜ್ಯೋತಿ ಸಭಾಂಗಣದಲ್ಲಿ ಇವತ್ತು ಮಸ್ತ್ ಮೊಹಬ್ಬತ್ ಸಿನಿಮಾದ ಫುಲ್ ಟೀಂ ಸೇರಿತ್ತು. ಎಲ್ಲರೂ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೆ ಪ್ರೇಮ್ ಗೆ ಈ ಸಿನಿಮಾ ಮತ್ತೊಂದು ಡೌಟೇ ಇಲ್ಲ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ  ಪೂನಂ, ನವೀನ್ ಕೃಷ್ಣ, ರಾಜುತಾಳಿಕೋಟೆ, ಸಾಧುಕೋಕಿಲ, ಸ್ವಯಂವರ ಚಂದ್ರು, ಅಶ್ವಿನ್, ಅರ್ಚನ, ಶಕಿಲಾ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments