Select Your Language

Notifications

webdunia
webdunia
webdunia
webdunia

ಮದುವೆ ವಾರ್ಷಿಕೋತ್ಸವ: ಅನಾಥರೊಂದಿಗೆ ಆಚರಿಸಿಕೊಂಡ ರಜನಿ-ಲತಾ

ಮದುವೆ ವಾರ್ಷಿಕೋತ್ಸವ: ಅನಾಥರೊಂದಿಗೆ ಆಚರಿಸಿಕೊಂಡ ರಜನಿ-ಲತಾ
, ಶುಕ್ರವಾರ, 27 ಫೆಬ್ರವರಿ 2015 (09:36 IST)
ನಿನ್ನೆ ಅಂದರೆ ಫೆಬ್ರವರಿ 26 ರಂದು ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ದಂಪತಿಗಳು ವೈವಾಹಿಕ ಬದುಕಿಗೆ ಕಾಲಿಟ್ಟ ದಿನ. ನಿನ್ನೆ ಅವರು ತಮ್ಮ ಸಮಯವನ್ನು ಅನಾಥರ ಜೊತೆ ಕಳೆದರು. 1981ರ ಫೆಬ್ರವರಿ 26ರಂದು ಪಾಣಿಗ್ರಹಣ ಮಾಡಿದ್ದ ಈ ದಂಪತಿಗಳು ಗುರುವಾರಕ್ಕೆ 34 ವರ್ಷಗಳ ಸುಗಮ ದಾಂಪತ್ಯ ಬದುಕನ್ನು ಪೂರೈಸಿದ್ದಾರೆ. 
ಈ ಸಮಯದಲ್ಲಿ ತಲೈವರ್ ಫೌಂಡೇಶನ್ ಅಡಿಯಲ್ಲಿ ಕಾಟ್ಟಾನ್ ಕೊಳತ್ತೂರಿನಲ್ಲಿರುವ ಶಿವಾನಂದ ಗುರುಕುಲ ಆಶ್ರಮದಲ್ಲಿ 320  ಅನಾಥ ಮಕ್ಕಳಿಗೆ, 60 ವರ್ಷ ವಯಸ್ಸಾದವರಿಗೆ ಅನ್ನದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರ ಅಭಿಮಾನಿ ಸಂಘದ ನಿರ್ವಾಹಕ ಸೈದೈರವಿ, ವಾಲಾಜ ಕಲಿಪ್ ಅವರು ಸಹಿತ ಭಾಗವಹಿಸಿದ್ದರು. 
 
ಅಷ್ಟೇ ಅಲ್ಲದೆ ರಜನಿ ಅಭಿಮಾನಿ ನೃತ್ಯ ನಿರ್ದೇಶಕ ಆದ ಲಾರೆನ್ಸ್ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಆಲಯದಲ್ಲಿ ವಿಶೇಷ ಪೂಜೆಗಳನ್ನು ಸಹಿತ ನೆರವೇರಿಸಲಾಯಿತು. ಚೆನ್ನೈ ನಗರದ ಅನೇಕ ದೇಗುಲಗಳಲ್ಲಿ ಸಹಿತ ಈ ದಂಪತಿಗಳ ಹೆಸರಲ್ಲಿ ಅರ್ಚನೆ , ಪೂಜೆಗಳು ನೆರವೇರಿತು.
 

Share this Story:

Follow Webdunia kannada