Select Your Language

Notifications

webdunia
webdunia
webdunia
webdunia

ಮನಿಷಾ ಮತ್ತೆ ಬಣ್ಣ ಹಚ್ತಾ ಇದ್ದಾರೆ.. ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ

ಮನಿಷಾ ಮತ್ತೆ ಬಣ್ಣ ಹಚ್ತಾ ಇದ್ದಾರೆ..  ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ
ಬೆಂಗಳೂರು , ಗುರುವಾರ, 2 ಅಕ್ಟೋಬರ್ 2014 (11:47 IST)
ಅನೇಕಾನೇಕ ಹಿಂದಿ ಚಿತ್ರಗಳು ಮತ್ತು ಒಂದಷ್ಟು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿರುವ ಮನಿಷಾ  ಕೊಯಿರಾಲ ಆ ಬಳಿಕ ವೈವಾಹಿಕ ಬದುಕನ್ನು ಆಯ್ಕೆ ಮಾಡಿಕೊಂಡರು ಸಹಿತ ಆಕೆಗೆ ಅಂತಿಮವಾಗಿ ಅದು ದಕ್ಕಲಿಲ್ಲ. ಅದರ ಶಾಕ್ ನಿಂದ ಹೊರ ಬಂದ ಈ ಪ್ರತಿಭಾವಂತ ಕಲಾವಿದೆಗೆ ಧುತ್ತನೆ ಎದುರಾಗಿದ್ದು ಕ್ಯಾನ್ಸರ್ ಕಾಯಿಲೆ. 
 
ಈಗ ಆ ಸಮಸ್ಯೆಯಿಂದ ದೂರಾಗಿದ್ದಾರೆ ಮತ್ತು ಹಾಯಾಗಿದ್ದಾರೆ ದೇವರು ಧ್ಯಾನ ಎಂದೆಲ್ಲ. ಈಗ ಈ ಹೆಣ್ಣುಮಗಳ ಬಗ್ಗೆ ಯಾವ ವಿಷಯಕ್ಕಾಗಿ ನಾವು ಬರೀತಾ ಇದ್ದಿವಿ ಅಥವಾ ನೆನಪಿಸಿ ಕೊಳ್ತಾ ಇದ್ದೀವಿ ಎಂದರೆ ಈಗ ಈ ನಟಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಮತ್ತೊಮ್ಮೆ ಹೊಸ ಉತ್ಸಾಹದಿಂದ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದರೆ ಮನಿಷ. ಎಲ್ಲವೂ ನಮಗೆ ಬಂದ ಮಾಹಿತಿಯಂತೆ ಆದರೆ ಮನಿಷಾ ಕೊಯಿರಾಲ ರಾಜ್ ಕುಮಾರ್ ಸಂತೋಷಿ ಅವರ ಮುಂದಿನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಹೇರಳವಾಗಿದೆ.
 
ಮನಿಷಾ ಆರೋಗ್ಯ ಈಗ ಚಂದ ಇದೆ ಎನ್ನುವ ಮಾಹಿತಿ ನೀಡಿದ್ದಾರೆ ಆಕೆಯ ಮ್ಯಾನೇಜರ್ ಸುಬ್ರತೋ ಘೋಷ್. ಪ್ರಸ್ತುತ ಆಕೆ ಸ್ಕ್ರಿಪ್ಟ್ ಓದುತ್ತಿರುವುದಾಗಿ ಸಹಿತ ಹೇಳಿದ್ದಾರೆ. ಒಟ್ಟಾರೆ ಒಂದರ್ಥದಲ್ಲಿ ರಾಜ್ ಕುಮಾರ್ ಸಂತೋಷಿ ಅವರ ಮುಂದಿನ ಚಿತ್ರದಲ್ಲಿ ಮನಿಷಾ ನಟಿಸುವ ಸಂಗತಿ  ಭಾಗಶಃ ಓಕೆ ಆಗಿದ್ದು, ಈ ಚಿತ್ರವು ನಿರೀಕ್ಷಿಸಿದಂತೆ ಆದಲ್ಲಿ 2015 ರ ಜನವರಿಯಲ್ಲಿ ಶೂಟಿಂಗ್ ಆರಂಭ ಆಗುತ್ತದೆ ಎನ್ನುವ ಮಾಹಿತಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಪಂಕಜ್ ಕಪೂರ್ ಸಹ ನಟಿಸುತ್ತಿದ್ದಾರೆ. 
 

Share this Story:

Follow Webdunia kannada