Select Your Language

Notifications

webdunia
webdunia
webdunia
webdunia

ಮನ ಮೆಚ್ಚಿದ ಬಂಗಾರು ರಿಲೀಸ್ ಗೆ ರೆಡಿ

ಮನ ಮೆಚ್ಚಿದ ಬಂಗಾರು ರಿಲೀಸ್ ಗೆ ರೆಡಿ
, ಬುಧವಾರ, 7 ಅಕ್ಟೋಬರ್ 2015 (11:19 IST)
ಬಹು ದಿನಗಳ ನಂತರ ಭಾವನಾತ್ಮಕ ಸಿನಿಮಾಗಳ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮತ್ತೆ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಪ್ರಕಾಶ್ ಮನ ಮೆಚ್ಚಿದ ಬಂಗಾರು ಸಿನಿಮಾದ ಮೂಲಕ ಮತ್ತೆ ಬಂದಿದ್ದಾರೆ.
ಸಾಯಿ ಪ್ರಕಾಶ್ ನಿರ್ದೇಸನದ ಈ ಸಿನಿಮಾ ತನ್ನ ಕೊನೆಯ ಹಂತದಲ್ಲಿದ್ದು ಇದೇ ತಿಂಗಳಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಹೆಸರೇ ಭಿನ್ನವಾಗಿರುವಂತೆ ಈ ಚಿತ್ರ ಟಿಫಿಕಲ್ ಫ್ಯಾಮಿಲಿ ಆಕ್ಷನ್ ಡ್ರಾಮಾವಂತೆ. ಈಗಾಗಲೇ ನೂರನೇ ಸಿನಿಮಾದ ಹೊಸ್ತಿಲಲ್ಲಿರುವ ಪ್ರಕಾಶ್ ಗೆ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
 
ಈ ಸಿನಿಮಾದಲ್ಲಿ ಬಳ್ಳಾರಿ ಮೂಲದ ರೈತ ಕುಟುಂಬದ ಹುಡುಗ ಬಂಗಾರು ಹನುಮಂತ ನಾಯಕನಾಗಿ ಕಾಣಿಸಿಕೊಂಡಿದ್ದಾನೆ. ರೋಜಾ ಸಿನಿಮಾದ ನಾಯಕಿ. ಡಾನ್ ಆಗಿ ರವಿಶೆಂಕರ್ ಕಾಣಿಸೊಕಂಡಿದ್ದಾರೆ. ಇನ್ನು ರವಿಶಂಕರ್ ಅವರದ್ದು ಸಿನಿಮಾದಲ್ಲಿ ವಿಭಿನ್ನ ಪಾತ್ರವಂತೆ. ವೇಶ್ಯೆಯರ ಅಡ್ಡಾದ ರಾಣಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಕೆ. ಕಲ್ಯಾಣ್ ಸಂಗೀತ ಸಂಯೋಜಿಸಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ಸಿನಿಮಾಕ್ಕಿದೆ.

Share this Story:

Follow Webdunia kannada