Webdunia - Bharat's app for daily news and videos

Install App

ವಿಂಡೋಸೀಟ್ ನಲ್ಲಿ ಮ್ಯಾಜಿಕಲ್ ಕಂಪೋಸರ್ ಮ್ಯೂಸಿಕ್ ಮ್ಯಾಜಿಕ್..!!

Webdunia
ಬುಧವಾರ, 30 ಸೆಪ್ಟಂಬರ್ 2020 (11:04 IST)
ಕಳೆದ ವಾರ ಬಿಡುಗಡೆಯಾದ ‘ವಿಂಡೋಸೀಟ್’ ಚಿತ್ರದ ಪುಟ್ಟ ಫಸ್ಟ್ ಲುಕ್ ವಿಡಿಯೋ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಮೆಚ್ಚುಗೆ ಗಳಿಸಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಫಸ್ಟ್ ಲುಕ್ ವಿಡಿಯೋನಲ್ಲೂ ರೊಮ್ಯಾಂಟಿಕ್ ಥ್ರಿಲ್ಲರ್ ಎಳೆಯನ್ನುಬಿಚ್ಚಿಟ್ಟಿರೋ ಚಿತ್ರತಂಡ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟಾಗಿಸಿದೆ.
‘ವಿಂಡೋಸೀಟ್’ ಫಸ್ಟ್ ಲುಕ್ ವಿಡಿಯೋ ಮೈನ್ ಹೈಲೈಟ್ ಮ್ಯೂಸಿಕ್.ಹೌದು, ‘ವಿಂಡೋಸೀಟ್’ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತಕೃಷಿಯಿದೆ. ಫಸ್ಟ್ ಲುಕ್ ವಿಡಿಯೋ ತುಣುಕಿನಲ್ಲಿರೋ ಮ್ಯಾಜಿಕಲ್ ಮ್ಯೂಸಿಕ್ ಕಮಾಲ್ಮಾಡಿದೆ. ಫಸ್ಟ್ ಲುಕ್ ನೋಡಿದವರೆಲ್ಲ ಬ್ಯಾಗ್ರೌಂಡ್ ಮ್ಯೂಸಿಕ್ಗೆ ಫಿದಾ ಆಗಿದ್ದಾರೆ.
 
ಇದ್ರಿಂದ ವಿಂಡೋಸೀಟ್ ಹಾಡುಗಳ ಮೇಲೆ ಇನ್ನಿಲ್ಲದ ನಿರೀಕ್ಷೆ ಕ್ರಿಯೇಟ್ ಆಗಿದ್ದು, ಮ್ಯೂಸಿಕ್ ಮಾಂತ್ರಿಕನಿಂದ ಮತ್ತೊಂದು ಸೂಪರ್ ಹಿಟ್ ಹಾಡುಗಳ ಹಂಗಾಮ‘ವಿಂಡೋಸೀಟ್’ ಮೂಲಕ ಪ್ರೇಕ್ಷಕರಿಗೆ ಸಿಗೋದ್ರಲ್ಲಿ ಡೌಟೇ ಇಲ್ಲ.
ಶೀತಲ್ ಶೆಟ್ಟಿ ಡೈರೆಕ್ಟರ್ ಕ್ಯಾಪ್ ತೊಟ್ಟಾಗ, ನಿರೂಪ್ ನಾಯಕನಟ ಎಂದಾಗ ಸೃಷ್ಟಿಯಾಗಿದ್ದ ನಿರೀಕ್ಷೆಗಳು ಫಸ್ಟ್ ಲುಕ್ ರಿಲೀಸ್ ಆದ ಬಳಿಕ ದುಪ್ಪಟ್ಟಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಸಿಕ್ತಿರೋ ರೆಸ್ಪಾನ್ಸ್ನಿಂದ ಚಿತ್ರತಂಡ ಕೂಡ ದಿಲ್ ಖುಷ್ ಆಗಿದೆ. ಇದೀಗ ರಿಲೀಸ್ಗೂ ಮೊದಲೇ ಹಾಡುಗಳ ಮೇಲೆ ಪ್ರೇಕ್ಷಕರಿಗೆ ಹುಟ್ಟಿಕೊಂಡಿರೋ ನಿರೀಕ್ಷೆ ಇಡೀ ‘ವಿಂಡೋಸೀಟ್’ ಚಿತ್ರತಂಡಕ್ಕೆ ಹೊಸ ಜೋಶ್ ನೀಡಿದೆ.
 
ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ನಲ್ಲಿ ರಂಗಿತರಂಗ ಖ್ಯಾತಿಯ ನಾಯಕ ನಟ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತಾ ಅಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

Link : https://www.youtube.com/watch?v=H2JRQWfuqsM

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments