Select Your Language

Notifications

webdunia
webdunia
webdunia
webdunia

ಫೆಬ್ರವರಿ 25ಕ್ಕೆ ಮಧುರ ಸ್ವಪ್ನ ಸಿನಿಮಾ ರಿಲೀಸ್

ಫೆಬ್ರವರಿ 25ಕ್ಕೆ ಮಧುರ ಸ್ವಪ್ನ ಸಿನಿಮಾ  ರಿಲೀಸ್
, ಶನಿವಾರ, 6 ಫೆಬ್ರವರಿ 2016 (10:34 IST)
ಸ್ಯಾಂಡಲ್ ವುಡ್ ಅಂಗಳದಲ್ಲಿ ಈಗ ಹೊಸಬರ ಸಿನಿಮಾಗಳ ಅಲೆ ಜೋರಾಗಿದೆ. ವಾರಕ್ಕೊಂದರಂತೆ ಹೊಸಬರ ಕನ್ನಡ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗುತ್ತಿವೆ. ಅಲ್ಲದೇ ಹೊಸಬರ ಸಿನಿಮಾಕ್ಕೆ ಭರ್ಜರಿ ರಸ್ಪಾನ್ಸ್ ಕೂಡ ಸಿಗುತ್ತಿದೆ. ಇದೀಗ ಮತ್ತೊಂದು ಹೊಸಬರ ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ.

ಮಧುರಸ್ವಪ್ನ. ಹೊಸಬರ ತಂಡದ ಸಿನಿಮಾ.ತುಳುನಾಡಿನ ಪ್ರತಿಭೆ ಅರ್ಜುನ್ ಕಾಪಿಕಾಡ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಇದೇ ತಿಂಗಳ 19 ರಂದು ರಿಲೀಸ್ ಆಗುತ್ತಿದೆ.ಸಿನಿಮಾದಲ್ಲಿ ಹಿರಿಯ ನಟಿ ವಿನಯ್ ಪ್ರಸಾದ್ ವಿಶೇಷವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಮಧುರಸ್ವಪ್ನ ಸಿನಿಮಾದ ಟ್ರೇಲರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳನ್ನು ಹುಟ್ಟಿ ಹಾಕ್ಕಿದ್ದು ಸಿನಿಮಾ ರಿಲೀಸ್ ಆಗೋದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
 
ಮಧುರ ಸ್ವಪ್ನ ಸಿನಿಮಾದಲ್ಲಿ ಅರ್ಜುನ್ ಕಾಪಿಕಾಡ್ ಅವರಿಗೆ ಇಬ್ಬರು ನಾಯಕಿಯರು. ಮಹಾಲಕ್ಷ್ಮಿ ಹಾಗೂ ಕೀರ್ತನಾ ಪೊಡ್ವಾಲ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.ರವಿರತ್ನಂ ಈ ಸಿನಿಮಾವನ್ನು ನಿರ್ದಶನ ಮಾಡಿದ್ದಾರೆ. ಹೆಚ್.ಎಂ. ಸಂಜೀವ್ ಕುಮಾರ್ ಸಿನಿವೂವನ್ನು ನಿರ್ಮಾಣ ಮಾಡಿದ್ದಾರೆ.ಚಿತ್ರವನ್ನು  ಬೆಂಗಳೂರು, ಕೋಲಾರ, ಕೆ ಜಿ ಎಫ್, ಸಕಲೇಶಪುರ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

Share this Story:

Follow Webdunia kannada