Webdunia - Bharat's app for daily news and videos

Install App

ಈಗ ಕ್ಯಾಲೆಂಡರ್ ಹುಡುಗಿಯರತ್ತ ಮಧುರ್ ಭಂಡಾರ್ಕರ್ ಚಿತ್ತ!

Webdunia
ಶನಿವಾರ, 4 ಜುಲೈ 2015 (10:17 IST)
ಬಾಲಿವುಡ್ ನಲ್ಲಿ ನಿರ್ದೇಶಕ ಮಧುರ ಭಂಡಾರ್ಕರ್ ಅವರು ಒಂದು ಬಗೆಯ ವಿಶಿಷ್ಟ ಹಾಗೂ ವಿಭಿನ್ನವಾದ ನಿರ್ದೇಶಕರು. ಇವರು ನಿರ್ಮಿಸುವ ಚಿತ್ರಗಳು ಸಮಾಜದಲ್ಲಿ ಸಂಚಲನ ಉಂಟು ಮಾಡುವಂತಹದ್ದಾಗಿದೆ. ಪ್ರಸಕ್ತ ಪರಿಸ್ಥಿತಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಧುರ್ ಆದ್ಯತೆ ನೀಡುತ್ತಾರೆ. ಈ ಮೊದಲು ಮಧುರ್ ಚಾಂದಿನಿ ಬಾರ್, ಮಾಡೆಲಿಂಗ್ ಗರ್ಲ್ಸ್ ಬಗ್ಗೆ ಫ್ಯಾಶನ್, ನಾಯಕಿಗಳ ಜೀವನಾಧಾರಿತ ಕಥೆ ಹೀರೋಯಿನ್ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದರು. ಈಗ ಮಧುರ್ ಗಮನ ಕ್ಯಾಲೆಂಡರ್ ಗರ್ಲ್ಸ್ ಕಡೆಗೆ ಹೊರಳಿದೆ. 
ಈಗ ಫ್ಯಾಶನ್ ಗರ್ಲ್ಸ್ ಅವರ ಹಾಟ್ ಹಾಟ್ ಫೋಟೋಗಳನ್ನು ಶೂಟ್ ಮಾಡಿ ಕ್ಯಾಲೆಂಡರ್ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಅಂತಹ ಕ್ಯಾಲೆಂಡರ್ ಹುಡುಗಿಯರ ಬದುಕಲ್ಲಿ ಫ್ಯಾಶನ್ ಇದೆಯೇ? ಅವರು ಪಡುವ ಕಷ್ಟ ಕಾರ್ಪಣ್ಯಗಳು ಏನು. ಅದೇರೀತಿ ಈ ರೀತಿಯಲ್ಲಿ ಇಂತಹ ಫೋಟೋ ಶೂಟ್ ಗಳಿಂದ  ದೊರಕುವ ಸಂಭಾವನೆ, ಹೆಸರು ಈ ಬಗ್ಗೆ ಆದ್ಯತೆ ನೀಡುವವರು. ಇಂತಹ ಎಲ್ಲ ಅಂಶಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆಯಂತೆ. ಈ ಚಿತ್ರದಲ್ಲಿ ಮುಖ್ಯವಾಗಿ ಐದು ಹುಡುಗಿಯರ ಬದುಕಲ್ಲಿ ಉಂಟಾಗುವ ಬದಲಾವಣೆ ತೋರಿಸಲಾಗುತ್ತದೆಯಂತೆ. ಈವರೆಗೂ ಯಾವುದೇ ಚಿತ್ರದಲ್ಲಿಯೂ ನಟಿಸದ ಸೆಕ್ಸಿ ಹಾಟ್ ಹುಡುಗಿಯರನ್ನು ಈ ಚಿತ್ರದಲ್ಲಿ ನಟಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ ಮಧುರ್. ಇದು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments