ಹಣ್ಣು, ದುಡ್ಡು ಕದೀತಾರೆ ಸಾರ್: ಪರಪ್ಪನ ಅಗ್ರಹಾರದ ಕರಾಳ ಕತೆ ಬಿಚ್ಚಿಟ್ಟ ಮಡೆನೂರು ಮನು

Krishnaveni K
ಬುಧವಾರ, 10 ಸೆಪ್ಟಂಬರ್ 2025 (11:46 IST)
ಬೆಂಗಳೂರು: ಸಹ ನಟಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜೈಲು ಪಾಲಾಗಿದ್ದ ನಟ ಮಡೆನೂರು ಮನು ಈಗ ಖ್ಯಾತ ಪತ್ರಕರ್ತ ಹರೀಶ್ ಅವರ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮನು ಸಹ ನಟಿ ಜೊತೆಗೆ ಕಾಂಪ್ರಮೈಸ್ ಮಾಡಿಕೊಂಡು ಕೇಸ್ ಖುಲಾಸೆ ಆಗಿತ್ತು. ಇದಾದ ಬಳಿಕ ಕುಡಿದ ಮತ್ತಿನಲ್ಲಿ ಶಿವಣ್ಣ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಅಡಿಯೋಗೆ ಸಂಬಂಧಪಟ್ಟಂತೆಯೂ ಕ್ಷಮೆ ಕೇಳಿ ಎಲ್ಲಾ ವಿವಾದಗಳನ್ನು ಸುಖಾಂತ್ಯ ಮಾಡಿಕೊಂಡಿದ್ದರು.

ಇದೀಗ ಅವರು ಹರೀಶ್ ನಾಗರಾಜು ಅವರ ಜೊತೆಗಿನ ಸಂದರ್ಶನದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅನುಭವ ಹಂಚಿಕೊಂಡಿದ್ದಾರೆ. ‘ಅದೇನೇ ಇರ್ಲಿ, ಜೈಲು ಎಂದರೆ ನರಕ ಸಾರ್. ಎಂತೆಂಥವರೋ ಇರ್ತಾರೆ, ಎಂಥಹದ್ದೋ ಭಯಾನಕ ಕತೆ ಹೇಳ್ತಾರೆ. ಒಂದು ಬ್ಯಾರಕ್ ನಲ್ಲಿ 70 ಜನ ಇರ್ತಾರೆ. ನಮ್ಮ ಸುತ್ತ ಇರುವವರೆಲ್ಲರದ್ದೂ ಒಂದೊಂದು ಕ್ರಿಮಿನಲ್ ಹಿನ್ನಲೆ. ಒಬ್ಬ ಕುರಿ, ಕೋಳಿ ಕುಯ್ದೆ ಎನ್ನುವ ಹಾಗೆ ಮನುಷ್ಯರಿಗೆ ಚುಚ್ಚಿಬಿಟ್ಟೆ, ಎತ್ತಿ ಬಿಟ್ಟೆ ಅಂತಾನೆ. ಎಷ್ಟೋ ವರ್ಷಗಳಿಂದ 15 ಸಾವಿರ ರೂ. ಶ್ಯೂರಿಟಿ ಕೊಡುವವರೂ ಇಲ್ಲದೇ ಜೈಲಿನಲ್ಲೇ ಇರುವವರೂ ಇರ್ತಾರೆ. ಅವರನ್ನೆಲ್ಲಾ ನೋಡುವಾಗ ಭಯವಾಗುತ್ತದೆ.

ನಂಗಂತೂ ಯಾವಾಗ ಹೊರಗೆ ಬರುತ್ತೇನೋ ಎನಿಸಿತ್ತು. ಅಲ್ಲೇ ಇದ್ದರೆ ಗ್ಯಾರಂಟಿ ಹುಚ್ಚು ಹಿಡಿಯುತ್ತೆ. ಯಾರಾದರೂ ಕರ್ಕೊಂಡು ಹೋಗಿ, ಹೊರಗಡೆ ಹೋಗಿ ಅಭಿಮಾನಿಗಳ ಕೈಯಲ್ಲಿ ಏಟು ತಿಂದು ಸತ್ತರೂ ಚಿಂತೆಯಿಲ್ಲ ಎನಿಸುತ್ತಿತ್ತು. ಸೀನಿಯರ್ ಖೈದಿಗಳು ಹೊಸಬರ ಕೈಲಿ ಟಾಯ್ಲೆಟ್, ಬಾತ್ ರೂಂ ಎಲ್ಲಾ ಕ್ಲೀನ್ ಮಾಡಿಸೋರು. ನಾನು ಸಿನಿಮಾ ನಟ ಎಂದು ಗೊತ್ತಾಗಿ ಪುಣ್ಯಕ್ಕೆ ನನ್ ಕೈಲಿ ಮಾಡಿಸಿರಲಿಲ್ಲ.

ಹಣ್ಣು, ತಿಂಡಿ ಎಲ್ಲಾ ಕದ್ದು ಬಿಡೋರು. 5 ರೂ. ಇದ್ದರೂ ಬಿಡ್ತಿರಲಿಲ್ಲ. ನಮ್ಮ ಕಣ್ಣೆದುರೇ ಹಣ್ಣು ಕಿತ್ತುಕೊಂಡು ತಿನ್ನುವಾಗ ಯಾಕಣ್ಣ ನಂದು ಅದು ಎಂದರೆ ಏಯ್ ಎತ್ತಿಬಿಡ್ತೀನಿ ಎಂದು ಆವಾಜ್ ಹಾಕುತ್ತಿದ್ದರು. ಆಗ ಭಯವಾಗಿ ಆಯ್ತು ಹೋಗ್ಲಿ ಬಿಡಣ್ಣಾ ಎನ್ನಬೇಕಿತ್ತು. ದುಡ್ಡು ಇಟ್ಟುಕೊಳ್ಳಲು ಕಷ್ಟ. ಪ್ಯಾಂಟ್ ದಾರ ಮಧ್ಯೆ ಬೀಡಿ ಕಟ್ಟಿದ ಹಾಗೆ ಯಾರಿಗೂ ಕಾಣದ ಹಾಗೆ ಇಡ್ಬೇಕಿತ್ತು. ಒಟ್ಟಿನಲ್ಲಿ ನರಕ ಸಾರ್ ಜೈಲು’ ಎಂದಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಮುಂದಿನ ಸುದ್ದಿ
Show comments