Select Your Language

Notifications

webdunia
webdunia
webdunia
webdunia

ದ್ವಿ ಭಾಷೆಗಳಲ್ಲಿ ಮೂಡಿ ಬರುತ್ತಿದೆ ಲವ್ ಯು ಅಲಿಯಾ

ದ್ವಿ ಭಾಷೆಗಳಲ್ಲಿ ಮೂಡಿ ಬರುತ್ತಿದೆ ಲವ್ ಯು ಅಲಿಯಾ
, ಬುಧವಾರ, 6 ಮೇ 2015 (10:05 IST)
ಕನ್ನಡದ ಚಾರ್ಮಿಂಗ್ ನಿರ್ದೇಶಕ ಇಂದ್ರಜಿತ್ ಲಂಕೇಶ್. ಅವರ ಹೊಚ್ಚ ಹೊಸ ಚಿತ್ರ ಲವ್ ಯು ಅಲಿಯಾ. ಈ ಚಿತ್ರದ ಶೀರ್ಷಿಕೆಯ ಬಗ್ಗೆ ಸಾಕಷ್ಟು ಗೊಂದಲವಿತ್ತು, ಆ ಬಗ್ಗೆ ನಾವು ಹೇಳಿದ್ದೆವು. ಮತ್ತೊಮ್ಮೆ ಅವುಗಳನ್ನು ನಿಮಗೆ ನೆನಪಿಸುತ್ತಿವೆ. ಆ ಚಿತ್ರ ಅಲಿಯಾ ಎನ್ನುವುದು ಅಳಿಯ ಎಂದು ಎಲ್ಲರು ಹೇಳುತ್ತಿದ್ದು, ಇದರಲ್ಲಿ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರಾದ ಸುಧಾರಾಣಿ ಸಹಿತ ಅಳಿಯ ಎನ್ನುವುದನ್ನೇ ಪ್ರಸ್ತಾಪ ಮಾಡಿದಾಗ ಇಂದ್ರಜಿತ್ ಆ ಹೆಸರಿನ ಬದಲಾವಣೆಗೆ ತೀರ್ಮಾನ ಮಾಡಿದ್ದರು. ಆದರೆ ಅಂತಿಮವಾಗಿ ಲವ್ ಯು ಅಲಿಯ ಶೀರ್ಷಿಕೆಯನ್ನೇ ಕೊಟ್ಟು ಶೂಟಿಂಗ್ ಮುಂದುವರೆಸಿದ್ದರು. 
ಈಗ ಬಂದಿರುವ ಸುದ್ದಿ ಏನೆಂದರೆ ಲವ್ ಯು ಅಲಿಯಾ ಚಿತ್ರ ಎರಡು ಭಾಷೆಗಳಲ್ಲಿ ಅಂದರೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂದ್ರಜಿತ್ ಅವರು ಈ ಮೊದಲು ಮೋನಾಲಿಸ ಚಿತ್ರವನ್ನು ಸಹಿತ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದರು. ಈಗ ಅಲಿಯಗೂ ಸಹಿತ ಇದೆ ಅವಕಾಶ ಸಿಕ್ಕಿದೆ.     
 
ಈ ಚಿತ್ರದಲ್ಲಿ ರವಿಚಂದ್ರನ್, ಭೂಮಿಕಾ ಚಾವ್ಲಾ, ರವಿಶಂಕರ್, ಚಂದನ್, ಶಕಿಲಾ ಮುಂತಾದವರು ಅಭಿನಯಿಸಿದ್ದಾರೆ. ಇದು ಈ ತಿಂಗಳ ಕೊನೆಯಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಬಹುದೆನ್ನುವ ಸಂಗತಿ ತಿಳಿದು ಬಂದಿದೆ. 

Share this Story:

Follow Webdunia kannada