Select Your Language

Notifications

webdunia
webdunia
webdunia
webdunia

ಪೂನಂ ಜೊತೆ ನಟಿಸಲು ತಂಡೋಪತಂಡವಾಗಿ ಬಂದ ಪಡ್ಡೆ ಹುಡುಗರು

ಪೂನಂ ಜೊತೆ ನಟಿಸಲು ತಂಡೋಪತಂಡವಾಗಿ ಬಂದ ಪಡ್ಡೆ ಹುಡುಗರು
, ಗುರುವಾರ, 28 ಮೇ 2015 (10:36 IST)
ನನ್ನ ಜೊತೆ ನಟಿಸಲು ಯಾರು ತಾನೇ ಬೇಡ ಅನ್ನುತಾರೆ ಎನ್ನುವ ಹೆಮ್ಮೆ , ಅಭಿಮಾನ ಆತ್ಮವಿಶ್ವಾಸ ಹೊಂದಿರುವ ನಟಿ . ಈ ಹಾಟ್ ಗರ್ಲ್ ಹೇಳಿದ ಮಾತು ಸುಳ್ಳು  ಎಂದು ಅನ್ನಲು ಸಾಧ್ಯವೇ? ಆಕೆಯ ಮನದ ಮಾತಂತೆ ನಡೆಸಲು ಬಹಳಷ್ಟು  ಮಂದಿ ಪೂನಂ ಜೊತೆ ನಟಿಸಲು ಅರ್ಜಿ ಹಾಕಿಕೊಂಡಿದ್ದಾರೆ. ಆ ಬಗ್ಗೆ  ಹೇಳುವುದಾದರೆ, ಪೂನಂ ಅವರು ಹೀರೋಯಿನ್ ಆಗಿ ನಟಿಸುತ್ತಿರುವ ಹೊಚ್ಚ ಹೊಸ ಚಿತ್ರ ಹೆಲೆನ್. 
 ಆದರೆ ಇದು ಪ್ರಸಿದ್ಧ ನಟಿ ಹೆಲೆನ್ ಅವರ ಬದುಕಿನ ಕಥೆಯನ್ನು ಹೊಂದಿಲ್ಲ. ಈ ಕಥೆ ಸಂಪೂರ್ಣವಾಗಿ ಬೇರೆಯ ಸ್ಟೋರಿಯನ್ನು ಹೊಂದಿದೆ ಎಂದಿದ್ದಾರೆ ಆ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ನಟಿಸಲು ಹಳೆ ಹೀರೊಗಳಿಗಿಂತ ಹೊಚ್ಚ ಹೊಸ ಹೀರೋವನ್ನು ಆಯ್ಕೆ ಮಾಡುವ ಎಂದು ನಿರ್ಮಾಪಕರು ನಿರ್ಧರಿಸಿದ ಕಾರಣ ಪೂನಂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕೌನ್ ಬನೇಗಾ ಪೂನಂ ಕಾ ಹೀರೋ ಎಂದು ಟ್ವೀಟ್  ಮಾಡಿದ್ದಾರೆ. ಅಲ್ಲದೆ ತನ್ನ ಜೊತೆ ನಟಿಸಲು ಎರಡು ನಿಮಿಷಗಳ ವಿಡೀಯೋ ಚಿತ್ರೀಕರಿಸಿ ಕಳುಹಿಸ ಬೇಕು ಎನ್ನುವ ಕಂಡೀಶನ್ ಸಹ ಆಕೆ ಹಾಕಿದ್ದಾರೆ. ಇಷ್ಟೆಲ್ಲಾ ಆಹ್ವಾನ ಕೊಟ್ಟ ಬಳಿಕ ಪಡ್ಡೆ ಹೈಕಳುಗಳಿಗೆ ಸುಮ್ಮನಿರಲು ಸಾಧ್ಯವೇ? 
 
ಆಕೆಯೊಂದಿಗೆ ಡ್ಯುಯೆಟ್ ಹಾಡಲು ನೂರಾರು ಮಂದಿ ಅರ್ಜಿ ಹಾಕುತ್ತಾರೆ ಆರಾಮವಾಗಿ ಆಯ್ಕೆ ಮಾಡ ಬಹುದು ಎಂದು ಕೊಂಡಿದ್ದ ನಿರ್ಮಾಪಕರಿಗೆ ಕಣ್ಣು ಕತ್ತಲಿಡುವಂತೆ ಆಗಿದೆ. ಅದಕ್ಕೆ ಕಾರಣ ಆಕೆಯ ಜೊತೆ ನಟಿಸಲು ಈಗ ಬಂದಿರುವ ಹುಡುಗರ ವೀಡಿಯೋಗಳ ಸಂಖ್ಯೆ ಬರೋಬ್ಬರಿ 25  ಸಾವಿರ. ಪೂನಮ್ಮ ಅಂದ್ರೆ ಸುಮ್ಮನೆ ಅಲ್ಲಮ್ಮ! 

Share this Story:

Follow Webdunia kannada