Select Your Language

Notifications

webdunia
webdunia
webdunia
webdunia

ದಂಡುಪಾಳ್ಯ ಪಾರ್ಟ್-2 ಸಿನಿಮಾಗೆ ರೆಡಿಯಾಗಿದ್ದಾರೆ ಪೂಜಾ ಗಾಂಧಿ

ದಂಡುಪಾಳ್ಯ ಪಾರ್ಟ್-2 ಸಿನಿಮಾಗೆ ರೆಡಿಯಾಗಿದ್ದಾರೆ ಪೂಜಾ ಗಾಂಧಿ
, ಶುಕ್ರವಾರ, 5 ಫೆಬ್ರವರಿ 2016 (13:36 IST)
ಬಿಗ್ ಬಾಸ್ ಮನೆಯಿಂದ ಹೊರ ಬಂದು ಇನ್ನು ವಾರನೂ ಆಗಿಲ್ಲ. ಆಗಲೇ ನಟಿ ಪೂಜಾ ಗಾಂಧಿ ಫುಲ್ ಬ್ಯುಸಿಯಾಗಿದ್ದಾರೆ. ಒಂದು ಕಡೆ ಸುದ್ದಿ ವಾಹಿನಿಗಳಲ್ಲಿ ಬಿಗ್ ಬಾಸ್ ಅನುಭವಗಳನ್ನು ಹಂಚಿಕೊಳ್ಳುತ್ತಿದ್ರೆ ಇದರ ಮಧ್ಯೆಯೇ ಪೂಜಾ ತಮ್ಮ ಮುಂದಿನ ಸಿನಿಮಾಗೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
 

 
ಅಂದ್ಹಾಗೆ ಪೂಜಾ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ದಂಡುಪಾಳ್ಯ ಪಾರ್ಟ್-2. ಈ ಹಿಂದೆ ದಂಡು ಪಾಳ್ಯ ಮೊದಲ ಭಾಗದಲ್ಲಿ ಪೂಜಾ ಕಾಣಿಸಿಕೊಂಡಿದ್ದರು. ಅಲ್ಲಿ ಖರ್ತನಾಕ್ ಕಳ್ಳಿಯಾಗಿ ಕಾಣಿಸಿಕೊಂಡಿದ್ದ ಪೂಜಾ ಇದೀಗ ಮತ್ತೆ ಕಳ್ಳಿಯಾಗಲು ರೆಡಿಯಾಗಿದ್ದಾರೆ. ನಾಲ್ಕು ವರ್ಷದ ಬಳಿಕ ದಂಡುಪಾಳ್ಯ ಪಾರ್ಟ್-2 ಸಿನಿಮಾವನ್ನು ಮಾಡಲಾಗ್ತಿದೆ. ಪೂಜಾ ಗಾಂಧಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡದೇ ಇರುತ್ತಿದ್ರೆ ಈ ಹಿಂದೆಯೇ ಸಿನಿಮಾದ ಶೂಟಿಂಗ್ ಆರಂಭವಾಗುತ್ತಿತ್ತು.
 
ದಂಡುಪಾಳ್ಯ ಪಾರ್ಟ್-2 ಸಿನಿಮಾವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡುತ್ತಿದ್ದಾರೆ.ಅಲ್ಲದೇ ಈ ಸಿನಿಮಾ ನಾಟಿ ಕೋಳಿ ಸಿನಿಮಾದ ರಿಪ್ಲೇಸ್ ಮೆಂಟ್ ಅಂತಾ ಹೇಳಲಾಗ್ತಿದೆ.ಇನ್ನು ಈ ಹಿಂದೆ ದಂಡುಪಾಳ್ಯ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಈ ಸಿನಿಮಾದಲ್ಲಿ ಕೂಡ ಕೆಲಸ ಮಾಡಲಿದೆಯಂತೆ. ಎಲ್ಲಾ ಅಂದುಕೊಂಡಂತೆ ಆದ್ರೆ ಶೀಘ್ರದಲ್ಲೇ ದಂಡುಪಾಳ್ಯ ಪಾರ್ಟ್-2 ಸಿನಿಮಾ ಸೆಟ್ಟೇರಲಿದೆ.

Share this Story:

Follow Webdunia kannada