Select Your Language

Notifications

webdunia
webdunia
webdunia
webdunia

ಕೋಮಲ್ ನಟನೆಯ ಲೊಡ್ಡೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

ಕೋಮಲ್ ನಟನೆಯ ಲೊಡ್ಡೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್
, ಗುರುವಾರ, 2 ಜುಲೈ 2015 (11:45 IST)
ಕೋಮಲ್ ಅವರ ಅಭಿನಯದ ಚಿತ್ರ ಲೊಡ್ಡೆ. ಇದನ್ನು ಸುರೇಶ್ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಈಗ ಸೆನ್ಸಾರ್ ಮಂಡಳಿಯಿಂದ ಯು/ ಎ ಸರ್ಟಿಫಿಕೇಟ್ ದೊರೆತಿದೆ. ಈ ಚಿತ್ರವನ್ನು ಇದೇ ತಿಂಗಳು ಅಂದರೇ ಜುಲೈನಲ್ಲಿ  ಬಿಡುಗಡೆ ಮಾಡುವ ಸನ್ನಾಹದಲ್ಲಿದ್ದಾರೆ ನಿರ್ದೇಶಕ ಸುರೇಶ್ ರಾಜ್ ಅವರು. 
ಶೂಟಿಂಗ್ ಪೂರ್ಣ ಆಗಿದ್ದರು ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ಈಗ ಲೊಡ್ಡೆ ಚಿತ್ರದ ಹಾಡುಗಳ ಚಿತ್ರೀಕರಣವೂ ಸಹ ಪೂರ್ಣವಾಗಿದೆ, ಇನ್ನು ಜನರ ಮುಂದೆ ಬರಬೇಕಿದೆ. ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆಯನ್ನು ಸುರೇಶ್ ರಾಜ್ ಅವರು ಹೊತ್ತಿದ್ದಾರೆ.ಚಿತ್ರವನ್ನು ಮಂಜುನಾಥ್  ಅವರು ನಿರ್ಮಿಸುತ್ತಿದ್ದಾರೆ. ಕೋಮಲ್ ಜೊತೆಗೆ ಆಕಾಂಕ್ಷ ಪುರಿ, ಸಯ್ಯಾಜಿ ರಾವ್ ಸಿಂಧ್ಯ ಮತ್ತು ಅವಿನಾಶ್ ಅವರು ನಟಿಸಿದ್ದಾರೆ. ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ. 

Share this Story:

Follow Webdunia kannada