Select Your Language

Notifications

webdunia
webdunia
webdunia
webdunia

ಪಹೇಲಿ ಲೀಲಾದಲ್ಲಿ ಸನ್ನಿ ಜೊತೆ ಮತ್ತಿನ ಪಡ್ಡೆ ಹೈಕ್ಳು...?!

ಪಹೇಲಿ ಲೀಲಾದಲ್ಲಿ ಸನ್ನಿ ಜೊತೆ ಮತ್ತಿನ ಪಡ್ಡೆ ಹೈಕ್ಳು...?!
, ಶನಿವಾರ, 28 ಫೆಬ್ರವರಿ 2015 (10:21 IST)
ಬಾಲಿವುಡ್ ಸಿನಿಮಾಗಳು ಎಂದರೆ ಭೂತ ಪ್ರೇತಗಳು, ಮಾದಕ ಸಂಗತಿಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕಾರಣ ಇಲ್ಲದೆ ಇಲ್ಲ, ನಮ್ಮವರು ಈಗ ಹಾಲಿವುಡ್ ವಿಧಾನದಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪೋರ್ನ್ ಸ್ಟಾರ್ಗಳನ್ನು ಭಾರತೀಯ ಚಿತ್ರರಂಗದಲ್ಲಿ ಪರಿಚಯಿಸಿ ಆ ಮೂಲಕ ಯಶಸ್ಸಿನ ಪತಾಕೆ ಹಾರಿಸುತ್ತಿದ್ದಾರೆ.
ಆ ರೀತಿ ಬಂದಂತಹ ಪೋರ್ನ್ ಸ್ಟಾರ್ ಸನ್ನಿ ಲಿಯೋನ್. ಆಕೆ  ಹೆಸರು ಕೇಳಿದರೆ ಗಂಡು ಹೃದಯಗಳು ಹುಚ್ಚೆದ್ದು ಕುಣಿದರೆ, ಹೆಣ್ಣು ಹೃದಯಗಳು ಕೋಪದಿಂದ ಬಡಬಡನೆ ಬಡಿಯುತ್ತದೆ. ಬಿಡಿ ಅವರ ಕಷ್ಟ ಅವರವರದ್ದು! ಬಾಲಿವುಡ್ ನಿರ್ದೇಶಕರು, ನಿರ್ಮಾಪಕರಿಗೆ ಬೇಕಾಗಿರುವ ಅಂಶಗಳು ಸನ್ನಿಯಲ್ಲಿ ಇರುವುದರಿಂದ ಆಕೆ ಅಂದ್ರೆ ಅಲ್ಲಿನವರಿಗೆ ಪಂಚಪ್ರಾಣ. ಕನ್ನಡದಲ್ಲಿ ಸಹಿತ ಜೋಗಿ ಪ್ರೇಂ ತಮ್ಮ ಚಿತ್ರ ಡಿಕೆಯಲ್ಲಿ ಡ್ಯಾನ್ಸ್ ಮಾಡಿಸಿದ್ದಾರೆ. 
 
ನಿರ್ಮಾಪಕಿ ಏಕ್ತಾ ಕಪೂರ್ ಜಿಸ್ಮ್  2ರಲ್ಲಿ ಅವಕಾಶ ನೀಡಿ ಸನ್ನಿ ತಾರ ಬದುಕಿಗೊಂದು ಉತ್ತಮ ಫಾರ್ಮ್ ನೀಡಿದ್ದಾರೆ. ಈಗ ಏಕ್  ಪಹೇಲಿ ಲೀಲಾ ಚಿತ್ರದಲ್ಲಿ ಸಹಿತ ಆಕೆಗೆ ದೊರಕಿರುವ ಅವಕಾಶ ಹಾಗೂ ಆಕೆ ನಟಿಸಿರುವ ರೀತಿಗೆ ಬೆಚ್ಚಿ ಬೆರಗಾಗಿದ್ದಾರೆ ಮಾದಕ ತಾರೆಗಳು. ಈ ಚಿತ್ರದಲ್ಲಿ ಈಕೆ ಹಾಲಿನಲ್ಲಿ ಸ್ನಾನ ಮಾಡುವ ದೃಶ್ಯವಿದೆ. ಹಾಲನ್ನು ಆಕೆಮೇಲೆ ಸುರಿದ ಬಳಿಕ ಅಲರ್ಜಿಯಿಂದ ಆಕೆ ಮೈಮೇಲೆ  ಗುಳ್ಳೆಗಳಾಯಿತಂತೆ. ಆದರೂ ಸಹಿತ ಪಾತ್ರಕ್ಕಾಗಿ ತಾನು ಕಷ್ಟ ಪಡಲು ಯೋಚನೆ ಮಾಡಲ್ಲ ಎಂದಿದ್ದಾಳೆ ಸನ್ನಿ.  ಏಕ್ ಪಹೇಲಿ ಈಗ ಸೋಶಿಯಲ್ ನೆಟ್ ವರ್ಕ್ ನ್ನು ಗಡಗಡನೆ ನಡಗಿಸುತ್ತಿದೆ ಎನ್ನುವುದು ಮಾತ್ರ ಸುಳ್ಳಲ್ಲ!

Share this Story:

Follow Webdunia kannada