Webdunia - Bharat's app for daily news and videos

Install App

ಮೈಸೂರಿನಲ್ಲಿ ರಜನಿಕಾಂತ್ ಲಿಂಗ ಚಿತ್ರದ ಭರ್ಜರಿ ಮುಹೂರ್ತ

Webdunia
ಶನಿವಾರ, 3 ಮೇ 2014 (09:10 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ ಲಿಂಗ ಅಕ್ಷಯ ತೃತೀಯದಂದು ಮೈಸೂರಿನ ಚಾಮುಂದೆಶ್ವರಿ ದೇವಾಲಯದ ಆವರಣದಲ್ಲಿ ಸೆಟ್ಟೇರಿತು. ಈ ಚಿತ್ರದ ಮುಹೂರ್ತವನ್ನು ಅಂದು ಮುಂಜಾನೆ ಮಾಡಲಾಗಿತ್ತು. 
 
ತಮ್ಮ ಮೊಮ್ಮಗ ಲಿಂಗ ಹೆಸರನ್ನು ಹೊಂದಿರುವ ಈ ಚಿತ್ರವನ್ನು ಕನ್ನಡದ ಪ್ರಸಿದ್ಧ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಮುತ್ತು ಮತ್ತು ಪಡೆಯಪ್ಪನ್ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ಎಸ್. ರವಿಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅನುಷ್ಕ ಶೆಟ್ಟಿ ಮತ್ತು ಸೋನಾಕ್ಷಿ ಸಿನ್ಹಾ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಈ ಚಿತ್ರದ ಮುಹೂರ್ತ ಮಾತ್ರವಲ್ಲ ಅತ್ಯಂತ ಮುಖ್ಯ ಸನ್ನಿವೇಶವನ್ನು ಸಹ ನಿನ್ನೆ ಚಿತ್ರೀಕರಣ ಮಾಡಲಾಯಿತು. ಮೈಸೂರು, ಮಂಡ್ಯ ಮತ್ತು ಇತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರದ ಶೂಟಿಂಗ್ ಗೆ ಮೈಸೂರು ಅರಮನೆಯಿನದ ಅನುಮತಿ ದೊರಕದೆ ದೊಡ್ಡ ಸುದ್ದಿ ಆಗಿತ್ತು. ಮೈಸೂರಿನಲ್ಲಿ ಮುಹೂರ್ತ ನಂತರ ಚಿತ್ರೀಕರಣ ಮಾಡಿದ ತಂಡಇಂದು  ಶ್ರೀರಂಗ ಪಟ್ಟಣ, ಕರಿಘಟ್ಟದಲ್ಲೂ ಸಹ ಚಿತ್ರೀಕರಣ ಮಾಡುತ್ತಾರೆ. ಚಿತ್ರಕ್ಕೆ ರಜನಿ ಕಾಂತ್ ಆಸ್ಥಾನ ವಿದ್ವಾಂಸ ಎ. ಆರ್. ರೆಹಮಾನ್ ಅವರ ಸಂಗೀತವಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?