Select Your Language

Notifications

webdunia
webdunia
webdunia
webdunia

ತೆರೆ ಮೇಲೆ ಬರಲಿದೆ ವಿನೋದ್ ಮೆಹ್ತಾ ಹಾಗೂ ಸಂಜಯ್ ಗಾಂಧಿ ಜೀವನ ಚರಿತ್ರೆ

ತೆರೆ ಮೇಲೆ ಬರಲಿದೆ ವಿನೋದ್ ಮೆಹ್ತಾ ಹಾಗೂ ಸಂಜಯ್ ಗಾಂಧಿ ಜೀವನ ಚರಿತ್ರೆ
, ಸೋಮವಾರ, 6 ಜುಲೈ 2015 (10:16 IST)
ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ ತಮ್ಮದೇ ಆದ ವಿಶಿಷ್ಟವಾದ  ಛಾಪನ್ನು ಒತ್ತಿರುವ ನಿರ್ದೇಶಕ  ಹನ್ಸಲ್ ಮೆಹತ. ಅವರು ಈಗ ಸಂಜಯ್ ಗಾಂಧಿ ಅವರ ಜೀವನ ಚರಿತ್ರೆಯ ಬಗ್ಗೆ ಸಿನಿಮಾ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ವಿನೋದ್ ಮೆಹತ ಅವರ ರಚನೆಯ ಪುಸ್ತಕ ದಿ ಸಂಜಯ್ ಸ್ಟೋರಿ  ಕಥೆಯನ್ನು ಚಿತ್ರರೂಪದಲ್ಲಿ ತರಲು ನಿರ್ಧಾರ ಮಾಡಿದ್ದಾರೆ. 
ವಿನೋದ್ ಮೆಹತ ಅವರ ಪುಸ್ತಕ ಅನೇಕ ವಿಶೇಷ ಸಂಗತಿಗಳನ್ನು ಹೊಂದಿದೆ ಎನ್ನುವ ಮಾತನ್ನು  ನಿರ್ದೇಶಕ ಹನ್ಸಲ್ ಹೇಳಿದ್ದಾರೆ. ಸಂಜಯ್ ಗಾಂಧಿ ಅವರ ಬದುಕಲ್ಲಿ ಅವರು ತುರ್ತು ಪರಿಸ್ಥಿತಿಯಲ್ಲಿ ಕೈಗೊಂಡ ನಿರ್ಧಾರಗಳು. ಅವರ ತಾಯಿ ಇಂದಿರಾಗಾಂಧಿ ನಡುವಿನ ಬಾಂಧವ್ಯ ಎಲ್ಲದರ ಬಗ್ಗೆ ಈ ಪುಸ್ತಕದಲ್ಲಿ ತಿಳಿಸಲಾಗಿದ್ದು, ಈಗ ಅದು ಹನ್ಸಲ್ ಅವರ ನಿರ್ದೇಶನದಲ್ಲಿ ಚಿತ್ರರೂಪದಲ್ಲಿ ಬರಲಿದೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಕ್ಕಿಯಾಗಿಲ್ಲ. ಆದರೆ ಇದು ಮುಂದಿನ ವರ್ಷ ಕೆಲಸ ಆರಂಭ ಮಾಡುತ್ತದೆ. ಇದರಲ್ಲಿ ಕಂಗನ ಮತ್ತು ಸಿಮ್ರಾನ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. 

Share this Story:

Follow Webdunia kannada