Select Your Language

Notifications

webdunia
webdunia
webdunia
webdunia

ಫ್ರೆಂಚ್ ಭಾಷೆಗೆ ರಿಮೇಕ್ ಆಗ್ತಿದೆ ಲಾಸ್ಟ್ ಬಸ್ ಸಿನಿಮಾ

ಫ್ರೆಂಚ್ ಭಾಷೆಗೆ ರಿಮೇಕ್ ಆಗ್ತಿದೆ ಲಾಸ್ಟ್ ಬಸ್ ಸಿನಿಮಾ
ಬೆಂಗಳೂರು , ಗುರುವಾರ, 4 ಫೆಬ್ರವರಿ 2016 (12:30 IST)
ಕನ್ನಡದಲ್ಲಿ ಸದ್ಯ ಸದ್ದು ಮಾಡುತ್ತಿರೋ ಸಿನಿಮಾ ಲಾಸ್ಟ್ ಬಸ್. ಈಗಾಗಲೇ ಲಾಸ್ಟ್ ಬಸ್ ಹತ್ತಿದವರೆಲ್ಲಾ ಇಳಿಯೋವಾಗ ಬಸ್ ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಕೂಡ ಇನ್ನು ಚಿತ್ರಮಂದಿರಗಳಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ.
 
 ಲಾಸ್ಟ್ ಬಸ್ ಸಿನಿಮಾ ಈಗಾಗಲೇ 25 ದಿನಗಳ ಪ್ರದರ್ಶನ ಪೂರೈಸಿದೆ. ಹೀಗಿರುವಾಗಲೇ ಸಿನಿಮಾ ಫ್ರೆಂಚ್ ಭಾಷೆಗೆ ರಿಮೇಕ್ ಆಗ್ತಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈಗಾಗಲೇ ಲಾಸ್ಟ್ ಬಸ್ ಸಿನಿಮಾದ ಹಾಡುಗಳು ತುಂಬಾನೇ ಫೇಮಸ್ ಆಗಿದ್ದು, ಇದೀಗ ಫ್ರೆಂಚ್ ಭಾಷೆಗೆ ಸಿನಿಮಾ ಡಬ್ ಆಗ್ತಿರೋದು ಸಿನಿಮಾ ತಂಡವನ್ನು ಖುಷಿ ಅಲೆಯಲ್ಲಿ ತೇಲಿಸಿದೆ.
 
ಸೈಕೋಲಾಡಿಕಲ್ ಥ್ರಿಲ್ಲರ್ ಸಿನಿಮಾವಾಗಿರುವ ಲಾಸ್ಟ್ ಬಸ್ ಸಿನಿಮಾವನ್ನು ಎಸ್.ಡಿ.ಅರವಿಂದ್ ನಿರ್ದೇಶನ ಮಾಡಿದ್ದಾರೆ. ಅವಿನಾಶ್ ನರಸಿಂಹರಾಜು, ಮಾನಸ ಜೋಶಿ, ಮೇಘಶ್ರೀ ಭಾಗವತರ್, ಸಮರ್ಥ್ ನರಸಿಂಹರಾಜು, ಸುಧಾ ನರಸಿಂಹರಾಜು, ರಾಕ ಶಂಕರ್, ಲೋಕೇಶ್ ಆಚಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  
 

Share this Story:

Follow Webdunia kannada