Select Your Language

Notifications

webdunia
webdunia
webdunia
webdunia

ರಣವಿಕ್ರಮನ ಮೇಲೆ ಲಹರಿಯ ಕೆಂಗಣ್ಣು

ರಣವಿಕ್ರಮನ ಮೇಲೆ ಲಹರಿಯ ಕೆಂಗಣ್ಣು
, ಶನಿವಾರ, 28 ಮಾರ್ಚ್ 2015 (10:26 IST)
ಅದೇನು ಗೊತ್ತಿದ್ದೂ ಮಾಡ್ತಾರೋ ಗೊತ್ತಿಲ್ಲದೇ ಇಂತಹ ತಪ್ಪು ಮಾಡ್ತಾರೋ ಗೊತ್ತಿಲ್ಲ. ಯಾಕೆ ಅಂದ್ರೆ ಈ ಚಿತ್ರರಂಗದಲ್ಲಿ ಇಂತಹ ಗೊಂದಲಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಲಹರಿ ಕಂಪನಿಯ ಮಾಲೀಕ ವೇಲು ಅವರು ಈಗ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ರಣವಿಕ್ರಮ ಚಿತ್ರದ ಮೇಲೆ ಕೆಂಗಣ್ಣು ಬೀರಿದ್ದಾರೆ. 
ರಣ ವಿಕ್ರಮ ತನ್ನ ಕೆಲಸ ಆರಂಭ ಮಾಡಿಕೊಂಡ ದಿನದಿಂದ ಏನಾದರೊಂದು ವಿವಾದದಲ್ಲಿ ಸಿಲುಕುತ್ತಲೇ ಇದೆ. ಟೀಸೀರಿಸ್ ಮೂಲಕ ಲಹರಿ ಆಡಿಯೋ ಆನ್ಲೈನ್ ತನ್ನ ಕಾರ್ಯ ನೆರವೇರಿಸುತ್ತದೆ. ಆದರೆ ಅದು ಈಗ ರಣ ವಿಕ್ರಮ ಮೇಲೆ ಕೋಪ ಮಾಡಿಕೊಂಡಿರುವುದರ ಹಿಂದೆ ಒಂದು ಕಾರಣ ಇದೆ. ರಣವಿಕ್ರಮದಲ್ಲಿ ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಡನ್ನು ಬಳಕೆ ಮಾಡಿಕೊಂಡಿದ್ದಾರೆ ವಿ ಹರಿಕೃಷ್ಣ. ತಮ್ಮ ಗಮನಕ್ಕೆ ತರದೇ ಡಾ.ರಾಜ್ ಕುಮಾರ್ ಹಾಡನ್ನು ಬಳಸಿಕೊಂಡ ಬಗ್ಗೆ ಅಸಮಾಧಾನ ಉಂಟಾಗಿದೆ ಲಹರಿ ವೇಲು ಅವರಿಗೆ. ಇದಕ್ಕೆ ಸಂಬಂಧಪಟ್ಟಂತೆ ಅವರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. 
 
ಜಗವೇ ಒಂದು ರಣರಂಗ ಎನ್ನುವ ಹಾಡು ಶಿವರಾಜ್ ಕುಮಾರ್ ಅಭಿನಯದ ರಣರಂಗ ಚಿತ್ರದ್ದು, ಇದನ್ನು ಡಾ.ರಾಜ್ ಕುಮಾರ್ ಅವರು ಹಾಡಿದ್ದರು. ಮತ್ತೊಂದು ಹಾಡು ಸೀತಾರಮಯ್ಯಗಾರಿ  ಮನವುರಾಲು ಚಿತ್ರದ ಹಾಡು. ಈ ಎರಡು ಹಾಡುಗಳು ಸಹ ಲಹರಿ ಕಂಪನಿಯ ಒಡೆತನಕ್ಕೆ ಸೇರಿದ್ದಾಗಿದೆ. ಆದರೆ ಅದರ ಬಗ್ಗೆ ಗಮನ ನೀಡದೆ ರಣವಿಕ್ರಮ ಬಳಸಿಕೊಂಡು ಲಹರಿಯವರ ಕೆಂಗಣ್ಣಿಗೆ ಗುರಿಯಾಗಿದೆ. 

Share this Story:

Follow Webdunia kannada