Webdunia - Bharat's app for daily news and videos

Install App

ಮೊಹಲ್ಲಾ ಅಸ್ಸಿ ಸಿನಿಮಾ ಬಿಡುಗಡೆಗೆ ತಡೆ

Webdunia
ಬುಧವಾರ, 1 ಜುಲೈ 2015 (10:48 IST)
ಸನ್ನಿ ಲಿಯೋನ್ ಅಭಿನಯ ಮೊಹೆಲ್ಲಾ ಅಸ್ಸಿ ಸಿನಿಮಾ ಬಿಡುಗಡೆಗೆ ಮುನ್ನವೇ ಹೊಸ ವಿವಾದಕ್ಕೆ ಗುರಿಯಾಗಿದೆ. ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ವಿಚಾರಗಳಿವೆ ಎನ್ನುವ ಕಾರಣಕ್ಕೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಸಿನಿಮಾ ಬಿಡುಗಡೆಗೆ ತಡೆ ನೀಡಿದೆ. ಆ ಮೂಲಕ ಬಿಡುಗಡೆಗೆ ಮುನ್ನವೇ ಮೊಹೆಲ್ಲಾ ಅಸ್ಸಿ ಚಿತ್ರ ತಂಡಕ್ಕೆ ಭಾರೀ ನಿರಾಸೆಯಾಗಿದೆ.
ಇತ್ತೀಚೆಗಷ್ಟೇ ಚಿತ್ರದ ಪ್ರೋಮೋ ಬಿಡುಗಡೆಯಾಗಿತ್ತು. ಪ್ರೋಮೋದಲ್ಲಿನ ಕೆಲವು ಕೀಳು ಮಟ್ಟದ ಸಂಭಾಷಣೆಗಳಿದ್ದು, ಇದರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರದ ರಿಲೀಸ್ ಗೆ ತಡೆ ಬಿದ್ದಿದೆ. ಇನ್ನು ಈ ಚಿತ್ರವನ್ನು ವಾರಾಣಾಸಿಯ ಅಸ್ಸಿ ಘಾಟ್ ನಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದ ಟ್ರೈಲರ್ ನುದ್ದಕ್ಕೂ ಅಶ್ಲೀಲ ಭಾಷೆಯನ್ನು ಬಳಸಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಅಲ್ಲದೇ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಸಿನಿಮಾದ ನಿರ್ದೇಶಕ , ನಿರ್ಮಾಪಕ ಹಾಗೂ ಸೆನ್ಸಾರ್ ಬೋರ್ಡ್ ಗೆ ತಿಳಿಸಿದೆ.
 
ಇನ್ನು ಈ ಸಿನಿಮಾದಲ್ಲಿ ಸನ್ನಿಲಿಯೋನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ರವಿ ಕಿಶನ್, ಸಾಕ್ಷಿ ತನ್ವಾರ್ ಮುಂತಾದವರ ಬಹುತಾರಾಗಣವಿದೆ. ಅಂದ್ಹಾಗೆ ಮೊಹೆಲ್ಲಾ ಅಸ್ಸಿ ಜುಲೈ 3 ರಂದು ತೆರೆ ಕಾಣಬೇಕಾಗಿತ್ತು. ಆದ್ರೀಗ ಸಿನಿಮಾ ಬಿಡುಗಡೆಗೆ ತಡೆ ಬಿದ್ದಿರೋದು ಅಭಿಮಾನಿಗಲಿಗೆ ನಿರಾಸೆ ಮೂಡಿಸಿದೆ. ಜೊತೆಗೆ ಸಿನಿಮಾದಲ್ಲೇನಿದೆ ಅನ್ನೋ ಕುತೂಹಲ ಹೆಚ್ಚಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments