Select Your Language

Notifications

webdunia
webdunia
webdunia
webdunia

ಕೃತಿಕಾ ಜಯಕುಮಾರ್ ಗೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ

ಕೃತಿಕಾ ಜಯಕುಮಾರ್ ಗೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ
, ಬುಧವಾರ, 25 ನವೆಂಬರ್ 2015 (11:03 IST)
ಕೃತಿಕಾ ಜಯಕುಮಾರ್ ಸದ್ಯ ಕನ್ನಡ ಹಾಗೂ ತೆಲುಗು ಎರಡೂ ಕಡೆಯು ಬಹು ಬೇಡಿಕೆಯಿರುವ ನಟಿ. ದೃಶ್ಯ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ವೆಂಕಟೇಶ್ ಮಗಳಾಗಿ ಕಾಣಿಸಿಕೊಂಡಿದ್ದ ಕೃತಿಕಾ ಅನೇಕ ಸಿನಿಮಾ ನಿರ್ಮಾಪಕರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಅದರಂತೆ ಪ್ರೀತಂ ಗುಬ್ಬಿ ಕೂಡ ತಮ್ಮ ಬಾಕ್ಸರ್ ಸಿನಿಮಾಗೆ ಕೃತಿಕಾ ಅವರನ್ನು ಆಯ್ಕೆ ಮಾಡಿದ್ರು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾದಲ್ಲಿನ ಕೃತಿಕಾ ಅಭಿನಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. 

ಈಗಾಗಲೇ ಸಿನಿಮಾ ನೋಡಿರುವ ನಕ ಸಿನಿ ಪಂಡಿತರು ತಮ್ಮ ಮುಂದಿನ ಸಿನಿಮಾಗೆ ಕೃತಿಕಾ ಜಯಕುಮಾರ್ ಅವರನ್ನು ನಾಯಕಿಯಾಗಿ ಮಾಡಿದ್ರೆ ಹೇಗಿರುತ್ತೆ ಅನ್ನೋ ಲೆಕ್ಕಾಚಾರದಲ್ಲೂ ಇದ್ದಾರಂತೆ. ಅಲ್ಲದೇ ಕೃತಿಕಾಗೆ ಈಗಾಗಲೇ ಕನ್ನಡದ ಮತ್ತೊಂದು ಸಿನಿಮಾದಲ್ಲಿ ನಟಿಸಲು ಆಫರ್ ಕೂಡ ಬಂದಿದೆಯಂತೆ. ನಾಗಚಂದ್ರ ನಿರ್ದೇಶಿಸುತ್ತಿರುವ ಜೋಗಿ ಗುಡ್ಡ ಸಿನಿಮಾದಲ್ಲಿ ಅಭಿನಯಿಸಲು ಕೃತಿಕಾಗೆ ಅವಕಾಶ ಸಿಕ್ಕಿದೆಯಂತೆ. ಈಗಾಗಲೇ ಸಿನಿಮಾದ ತಾರಾಗಣವನ್ನು ಫೈನಲ್ ಮಾಡಿದ್ದಾರಂತೆ ನಿರ್ದೇಶಕರು. ಬಾಕ್ಸರ್ ಸಿನಿಮಾದಲ್ಲಿ ಅಂಧ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಕೃತಿಕಾ ಅಭಿನಯ ನೋಡಿಯೇ ಅವರಿಗೆ ಈ ಸಿನಿಮಾದಲ್ಲಿ ಛಾನ್ಸ್ ಸಿಕ್ಕಿದೆಯಂತೆ.
 
ಸಿನಿಮಾದಲ್ಲಿ ಕೃತಿಕಾ ಗೆ ನಾಯಕನಾಗಿ ಧರ್ಮ ಕೀರ್ತಿ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ರವಿಶಂಕರ್, ಅವಿನಾಶ್, ರಾಜು ತಾಳಿಕೋಟೆ, ಬಿರಾದಾರ್ ಮುಂತಾದವರು ಅಭಿನಯಿಸಲಿದ್ದಾರಂತೆ.ಇನ್ನು ಜೋಗಿ ಗುಡ್ಡ ಅನ್ನೋದು ಒಂದು ಸ್ಥಳದ ಹೆಸರಂತೆ. ಚಿತ್ರದುರ್ಗದ ಸಮೀಪ ಜೋಗಿ ಗುಡ್ಡ ಅನ್ನೋ ಊರಿದೆಯಂತೆ. ಅಲ್ಲಿ ನಡೆಯುವ ಪ್ರೇಮಕಥೆಯೊಂದೇ ಸಿನಿಮಾದ ಕಥಾ ಹಂದರವಂತೆ. ಸಿನಿಮಾ ಮುಂದಿನ ತಿಂಗಳು 18ರಿಂದ ಶೂಟಿಂಗ್ ಆರಂಭಿಸಲಿದೆಯಂತೆ. ಜೆಸ್ಸಿ ಗಿಫ್ಟ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಲಿದು, ಕವಿರಾಜ್ ಹಾಡುಗಳನ್ನು ಬರೆಯಲಿದ್ದಾರೆ.

Share this Story:

Follow Webdunia kannada