Select Your Language

Notifications

webdunia
webdunia
webdunia
webdunia

ಸಂಜು ವೆಡ್ಸ್ ಗೀತ ಮುಂದುವರೆದ ಭಾಗದಲ್ಲಿ ಕೃತಿ ಕರಬಂಧ ನಟನೆ

ಸಂಜು ವೆಡ್ಸ್ ಗೀತ ಮುಂದುವರೆದ ಭಾಗದಲ್ಲಿ ಕೃತಿ ಕರಬಂಧ ನಟನೆ
, ಗುರುವಾರ, 26 ಫೆಬ್ರವರಿ 2015 (12:05 IST)
ಸಂಜು ವೆಡ್ಸ್ ಗೀತ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯ ಅವರು ಅಭಿನಯಿಸಿದ್ದರು. ಆ ಚಿತ್ರ ಯಶಸ್ವಿ ಆಗಿತ್ತು. ಅದನ್ನು ನಾಗ್ ಶೇಖರ್ ಅವರು ನಿರ್ದೇಶನ ಮಾಡಿದ್ದರು. ಆ ಚಿತ್ರದ ಮುಂದುವರೆದ ಭಾಗ ಈಗ ಮತ್ತೆ ತನ್ನ ಕೆಲಸ ಆರಂಭ ಮಾಡಿದೆ. ಅದರಲ್ಲಿ ಕೃತಿ ಕರಬಂಧ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಸೂಪರ್ ರಂಗದ ನಟಿ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಅಂಧ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರಕ್ಕೆ ಸಂಬಂಧ ಪಟ್ಟ ದಿನಾಂಕ ಮತ್ತು ಸಮಯ ಎಲ್ಲವನ್ನು ಸಹಿತ ಆಕೆ ನಿಗದಿ ಪಡಿಸಿ ಅಂತಿಮವಾಗಿ ಚಿತ್ರದ ಕೆಲಸಗಳಿಗೆ ತನ್ನ ತನು ಮನ ಮೀಸಲಿಟ್ಟಿದ್ದಾಳೆ. 
ಆರಂಭದಲ್ಲಿ ಈಕೆ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಅನುಮಾನಗಳಿತ್ತು, ಆದರೆ ಈಗ ಎಲ್ಲವು ಸರಿಯಾಗಿದೆ, ಆಕೆ ನಟಿಸಲು ಸಿದ್ಧ ಆಗುತ್ತಿದ್ದಾಳೆ. ನಾನು ಈಗ ಅತ್ಯಂತ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸ ಬೇಕಾದ್ದರಿಂದ ಪೂರಕವಾದ ತರಬೇತಿಯ ಅಗತ್ಯವಿದೆ. ಆದ ಕಾರಣ ನಾನು ಇದಕ್ಕೆ ಪೂರಕವಾದ ಕೆಲಸ ಮಾಡ ಬೇಕಿತ್ತು. ಮುಖ್ಯವಾಗಿ ಚಿತ್ರತಂಡ ನನಗೆ ತರಬೇತು ನೀಡಲು ನಿರ್ಧಾರ ಮಾಡಿದ್ದರು. ಅಂತಿಮವಾಗಿ ನಾನು ಅವರೊಂದಿಗೆ ಸೇರ್ಪಡೆ ಆಗಲು ನಿರ್ಧರಿಸಿದೆ. 
 
ಈ ಚಿತ್ರ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಗೊಳ್ಳಲಿದೆ. ಒಟ್ಟು 35 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯುವ ಬಗ್ಗೆ ನಿರೀಕ್ಷೆ ಮಾಡಲಾಗಿದೆ. ಇದರಲ್ಲಿ ನಿರ್ಮಾಪಕ ಸಹನಟ ನಾಗಶೇಖರ್ ಅವರು ಕೃತಿಗೆ ಆರಾಮ ಆಗುವ ದಿನಗಳಲ್ಲಿ ಚಿತ್ರೀಕರಣ, ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದಿದ್ದಾಳೆ. ಇದು ದೈಹಿಕ ಹಾಗು ಭಾವನಾತ್ಮಕ ಅಂಶಗಳನ್ನು ಒಳಗೊಂಡ ಪಾತ್ರವಾದ್ದರಿಂದ ಈ ಗ್ಲಾಮರ್ ಹುಡುಗಿ ಸಾಕಷ್ಟು ಕಷ್ಟ ಪಡ ಬೇಕಿದೆ. ಈ ಚಿತ್ರವನ್ನು ನಾಗ್ ಶೇಖರ್ ಅವರ ಸಹೋದರ ರಾಮ್ ಚಿರು ನಿರ್ದೇಶಿಸುತ್ತಿದ್ದಾರೆ.

Share this Story:

Follow Webdunia kannada