Select Your Language

Notifications

webdunia
webdunia
webdunia
webdunia

ಮತ್ತೊಂದು ಸಿನಿಮಾದಲ್ಲಿ ನಟಿಸಲು ರೆಡಿಯಾದ ಕೃಷ್ಣ

ಮತ್ತೊಂದು ಸಿನಿಮಾದಲ್ಲಿ ನಟಿಸಲು ರೆಡಿಯಾದ ಕೃಷ್ಣ
, ಬುಧವಾರ, 1 ಜುಲೈ 2015 (10:45 IST)
ಕೃಷ್ಣಾ ಲೀಲಾ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅಜಯ್ ರಾವ್, ಮತ್ತೊಂದು ಸಿನಿಮಾದಲ್ಲಿ ನಟಿಸಲು ರೆಡಿಯಾಗುತ್ತಿದ್ದಾರೆ.ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಅನಿಲ್ ಕುಮಾರ್ ಕಾಂಬೀನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಅಜಯ್ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಅಜಯ್ ತಮ್ಮ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿರುವ ನಿರ್ಮಾಪಕ ಉದಯ್ ಮೆಹ್ತಾ, 5 ವರ್ಷಗಳ ನಂತರ ಅಜಯ್ ರಾವ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ. ಇನ್ನು ಅಜಯ್ ರಾವ್ ಅ ವರಿಗೆ ಸ್ಯಾಂಡಲ್ ವುಡ್ ನಲ್ಲಿ ಭಾರೀ ಯಶಸ್ಸು ತಂದುಕೊಟ್ಟಿದ್ದ  ಕೃಷ್ಣನ್ ಲವ್ ಸ್ಟೋರಿ ಸಿನಿಮಾವನ್ನು ಉದಯ್ ಅವರೇ ನಿರ್ಮಿಸಿದ್ದರು. ಇದಾದ 5 ವರ್ಷಗಳ ಬಳಿಕ ಮತ್ತೊಮ್ಮೆ ಅಜಯ್ ರಾವ್ ಅವರ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಉದಯ್ ಮೆಹ್ತಾ ತಿಳಿಸಿದ್ದಾರೆ. 
 
ಇನ್ನು ದಿಲ್ ವಾಲ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ್ದ ಅನಿಲ್, ಅಜಯ್ ರಾವ್ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಮ್ಮಿಬ್ಬರ ಜೋಡಿ ಸಖತ್ ವರ್ಕ್ ಔಟ್ ಆಗುತ್ತದೆ ಅಂತಾ ನಿರ್ಮಾಪಕರು ತಿಳಿಸಿದ್ದಾರೆ. ಇನ್ನು ಸಿನಿಮಾಕ್ಕೆ ಚಿತ್ರಕಥೆ ಸಿದ್ಧವಾಗುತ್ತಿದ್ದು ಎಲ್ಲಾ ವರ್ಗದ ಪ್ರೇಕ್ಷಕರು ನೋಡಬಹುದಾದ ಸಿನಿಮಾ ಇದಾಗಿದೆ.  ಎಲ್ಲಾ ಅಂದುಕೊಂಡಂತೆ ಆದ್ರೆ ಆಗಸ್ಟ್ 15 ರಂದು ಶೂಟಿಂಗ್ ಪ್ರಾರಂಭಗೊಳ್ಳಲಿದೆ.

Share this Story:

Follow Webdunia kannada