Webdunia - Bharat's app for daily news and videos

Install App

ಲೋಕಲ್ ಟ್ರೈನ್‌ನಲ್ಲಿ ಮದರಂಗಿ ಕೃಷ್ಣ ಎಸ್ತರ್ ಜೊತೆ ಹೆಜ್ಜೆ...?!

Webdunia
ಗುರುವಾರ, 26 ಮಾರ್ಚ್ 2015 (09:50 IST)
ಲೋಕಲ್ ಟ್ರೈನ್ ಚಿತ್ರ ಸಂಜನ ಸಿನಿ ಆರ್ಟ್ಸ್ ಲಾಂಛನದಲ್ಲಿ ಎಸ್.ಹೆಚ್.ವಾಲ್ಕೆ ಅವರು ನಿರ್ಮಿಸುತ್ತಿದ್ದಾರೆ. ಮದರಂಗಿ ಕೃಷ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಹಾಡು ಇತ್ತೀಚಿಗೆ ಚಿತ್ರೀಕರಣವಾಯ್ತು. 
ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ಸನಿಹ ಸನಿಹ ನೋಡುತ್ತಿದ್ದರೆ ನೀನು ನೋಡುತ್ತಿದ್ದರೆ ಎಂಬ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ ನಲ್ಲಿ ನಡೆಯಿತು . ಚಿನ್ನಿಪ್ರಕಾಶ್ ನೃತ್ಯ ಸಂಯೋಜನೆಗೆ ಮದರಂಗಿ ಕೃಷ್ಣ ಹಾಗೂ ಎಸ್ತರ್ ನರೋನ ಅಭಿನಯಿಸಿ ಹೆಜ್ಜೆ ಹಾಕಿದ್ದಾರೆ. 
 
ಲೋಕಲ್ ಟ್ರೈನ್‌ಗೆ ಜೀವ ಕೊಟ್ಟವರು ಎನ್.ರುದ್ರಮುನಿ. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದಲ್ಲಿ ಜಯಂತ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಸಂಭಾಷಣೆಯನ್ನು ಕೇಶವಾದಿತ್ಯ ಬರೆದಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಪಿ.ಆರ್,ಸೌಂದರ್ ರಾಜ್ ಸಂಕಲನ, ರಾಮ್ ಶೆಟ್ಟಿ, ರಮೇಶ್ ಸಾಹಸ ನಿರ್ದೇಶನ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಈಶ್ವರಿ ಕುಮಾರ್ ಕಲಾ ನಿರ್ದೇಶನ ಲೋಕಲ್ ಟ್ರೈನ್ ಚಿತ್ರಕ್ಕಿದೆ. ಮದರಂಗಿ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ತರ್ ನರೋನ, ಲೋಕೇಶ್(ಭಜರಂಗಿ), ಸುಚೀಂದ್ರಪ್ರಸಾದ್ ಮುಂತಾದವರು ಲೋಕಲ್ ಟ್ರೈನ್ ಪ್ರಯಾಣಿಕರಾಗಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments