Select Your Language

Notifications

webdunia
webdunia
webdunia
webdunia

ಲೊಡ್ಡೆ ಬಳಿಕ 'ಪುಟ್ಟಣ್ಣ' ಚಿತ್ರಕ್ಕೆ ಸಹಿ ಹಾಕಿದ ಕೋಮಲ್

ಲೊಡ್ಡೆ ಬಳಿಕ 'ಪುಟ್ಟಣ್ಣ' ಚಿತ್ರಕ್ಕೆ ಸಹಿ ಹಾಕಿದ ಕೋಮಲ್
, ಗುರುವಾರ, 30 ಏಪ್ರಿಲ್ 2015 (10:34 IST)
ಸದ್ದುಗದ್ದಲವಿಲ್ಲದೆ ನಟ ಕೋಮಲ್ ಹಾಗೂ ಚಿತ್ರತಂಡ 'ಲೊಡ್ಡೆ' ಚಿತ್ರದ ಶೂಟಿಂಗ್ ಕೆಲಸವನ್ನು ಪೂರ್ಣಮಾಡಿದೆ. ಈಗ ಬಂದಿರುವ ಸುದ್ದಿ ಏನೆಂದರೆ ನಟ ಕೋಮಲ್ ಹೊಸ ಚಿತ್ರವೊಂದಕ್ಕೆ ಸಹಿಮಾಡಿದ್ದು, ಚಿತ್ರದ ಕಥೆ, ಚಿತ್ರಕಥೆಯನ್ನು ಬರೆದಿದ್ದು, ವಿವಾದಿತ ನಿರ್ದೇಶಕ ಶ್ರೀನಿವಾಸರಾಜು ಅವರದ್ದೇ ಆಗಿದ್ದು, ಅವರ ನಿರ್ದೇಶನದಲ್ಲಿಯೇ ಮೂಡಿಬರುತ್ತಿದೆ. ಚಿತ್ರಕ್ಕೆ 'ಪುಟ್ಟಣ್ಣ' ಎಂದು ನಾಮಕರಣ ಮಾಡಲಾಗಿದೆ. 
ಈ ಚಿತ್ರ ಕನ್ನಡದ ಪ್ರಸಿದ್ಧ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನು ಹೋಲುತ್ತಿದ್ದರೂ ಆ ಚಿತ್ರದ ಬಗ್ಗೆ ಯಾವುದೇ ಬಗೆಯ ಗುಟ್ಟು ಬಿಟ್ಟಿಲ್ಲ ಶ್ರೀನಿವಾಸರಾಜು. ಆದರೆ ಮಾಹಿತಿ ಪ್ರಕಾರ ಇದು ಹಾಸ್ಯ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆಯಂತೆ. 
 
ಈ ಚಿತ್ರದಲ್ಲಿ ಕೋಮಲ್ ಜೊತೆ ಪ್ರಿಯಾಮಣಿ ನಟಿಸುತ್ತಿದ್ದಾರಂತೆ. ಕೋಮಲ್ ಹಾಗೂ ಪ್ರಿಯಾಮಣಿ ಅಲ್ಲದೆ ರವಿಶಂಕರ್, ದೊಡ್ಡಣ್ಣ, ಸಾಧುಕೋಕಿಲ ಮುಂತಾದವರು ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಇದನ್ನು ದಂಡುಪಾಳ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದ ನಾರಾಯಣ ಬಾಬು ಅವರು ನಿರ್ಮಾಣ ಮಾಡುತ್ತಿದ್ದಾರೆ.ಇದು ಜೂನ್ ನಲ್ಲಿ ಕೆಲಸ ಆರಂಭ ಮಾಡಲಿದೆ. 

Share this Story:

Follow Webdunia kannada