Webdunia - Bharat's app for daily news and videos

Install App

ಎಡವಟ್ಟಾಯ್ತು ಕಿರಿಕ್ ಪಾರ್ಟಿ ಹಾಡು

Webdunia
ಗುರುವಾರ, 8 ಡಿಸೆಂಬರ್ 2016 (08:56 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ಹಾಡುಗಳು ಬಿಡುಗಡೆಯಾಗುತ್ತಿದ್ದ ಹಾಗೇ ಒಂದೊಂದೇ ಸೂಪರ್ ಹಿಟ್ ಆಗುತ್ತಿತ್ತು. ಯೂ ಟ್ಯೂಬ್ ನಲ್ಲಿ ಭಾರೀ ಲೈಕ್ಸ್ ಪಡೆಯುತ್ತಿತ್ತು. ಆದರೆ ಶೆಟ್ಟರ ಒಂದು ಹಾಡು ಈಗ ಎಡವಟ್ಟು ಮಾಡಿಕೊಂಡಿದೆ.

ಕೊನೆಯದಾಗಿ ಬಿಡುಗಡೆಯಾದ  ಹೇ ಹೂ ಆರ್ ಯೂ ಹಾಡು ಕಿರಿಕ್ ಮಾಡಿಕೊಂಡಿದೆ. ಇದು ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದ ಹಾಡಿನ ಟ್ಯೂನ್ ಆಗಿತ್ತು. ಇದು ರವಿಚಂದ್ರನ್ ಮತ್ತು ಹಂಸಲೇಖಾ ಅವರಿಗೆ ಡೆಡಿಕೇಟ್ ಮಾಡಿದ ಹಾಡು ಎಂದು ಚಿತ್ರತಂಡ ಘೋಷಿಸಿತ್ತು.

ಆದರೆ ಈ ಹಾಡಿನ ಟ್ಯೂನ್ ಬಳಕೆಗೆ ಆಕ್ಷೇಪವೆದ್ದಿದೆ. ರವಿಚಂದ್ರನ್ ಅವರ ಈಶ್ವರಿ ಕಂಬೈನ್ಸ್ ನಿರ್ಮಾಣದ ಈ ಚಿತ್ರದ ಹಾಡುಗಳ ಹಕ್ಕು ಲಹರಿ ಸಂಸ್ಥೆಯ ಬಳಿಯಿದೆ. ಆದರೆ ಈ ಹಾಡಿನ ಟ್ಯೂನ್ ಬಳಕೆ ಮಾಡುವ ಮೊದಲು ಕಿರಿಕ್ ಪಾರ್ಟಿ ತಂಡ ಲಹರಿ ಸಂಸ್ಥೆಯಿಂದ ಒಪ್ಪಿಗೆ ಪಡೆದಿರಲಿಲ್ಲ. ಹೀಗಾಗಿ ಕೇಸು ದಾಖಲಿಸದೆ ನಮಗೆ ಬೇರೆ ದಾರಿಯಿಲ್ಲ ಎಂದು ಲಹರಿ ಸಂಸ್ಥೆಯ ವೇಣು ಹೇಳಿದ್ದಾರೆ.

ಹೀಗಾಗಿ ಕಿರಿಕ್ ಪಾರ್ಟಿ ಹಾಡು ಬಳಸಿದ್ದಕ್ಕೆ ಕೋಟಿಗಟ್ಟಲೆ ದಂಡ ತೆರಬೇಕಾಗಿ ಬರಬಹುದು. ಹಳೇ ಹಾಡು ಬಳಸುವ ಮೊದಲು ಎಚ್ಚರಿಕೆ ತೆಗೆದುಕೊಳ್ಳದಿದ್ದರೆ ಹೀಗೇ ಆಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಕಿಯಾರ ಅಡ್ವಾಣಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ರಾಕಿಂಗ್ ಸ್ಟಾರ್ ಯಶ್

ಮುಂದಿನ ಸುದ್ದಿ
Show comments