Select Your Language

Notifications

webdunia
webdunia
webdunia
webdunia

ಹೊಸ ಮೈಲಿಗಲ್ಲಿನಲ್ಲಿ ಕಿಂಗ್ ಖಾನ್

ಹೊಸ ಮೈಲಿಗಲ್ಲಿನಲ್ಲಿ ಕಿಂಗ್ ಖಾನ್
, ಶುಕ್ರವಾರ, 4 ಸೆಪ್ಟಂಬರ್ 2015 (09:35 IST)
ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲದ ಸ್ಟಾರ್ ಗಳನ್ನ ನಮ್ಮ ಜನ ದಡ್ಡರು ಅಂತಾನೆ ಡಿಸೈಡ್ ಮಾಡಿಬಿಟ್ಟದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ನೇರವಾಗಿ ಸಂಪರ್ಕಕ್ಕೆ ಸಿಗೋ ಮಾಧ್ಯಮವೇ ಸಾಮಾಜಿಕ ಜಾಲತಾಣಗಳು. ಅಷ್ಟೇ ಅಲ್ಲದೆ ಇವುಗಳ ಮೂಲಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾಗಳಿಂದಾಗಿ ತಮ್ಮ ಅಭಿಮಾನಿಗಳಿಗೆ ಸಾಕಷ್ಟು ಹತ್ತಿರವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವತ್ತಿಗೂ ಬಿಗ್ ಬಿಯೇ ನಂಬರ್ ಒನ್. ಅವರ ನಂತರದ ಸ್ಥಾನದಲ್ಲಿರೋದು ಶಾರುಖ್ ಖಾನ್ . 
ಶಾರುಖ್ ಖಾನ್ ಇದೀಗ ಟ್ವಿಟ್ಟರ್ ನಲ್ಲಿ 15 ಮಿಲಿಯನ್ ಹಿಂಬಾಲಕರ ಗಡಿ ದಾಟಿದ ಎರಡನೇ ಭಾರತೀಯ ನಟ ಎನಿಸಿಕೊಂಡಿದ್ದಾರೆ. ಶಾರೂಕ್ ಖಾನ್ ರ ಈ ಮಟ್ಟಿನ ಫೇಮಸ್ ಗೆ ಕಾರಣವಾದ ಅಭಿಮಾನಿಗಳಿಗೆ ಟ್ವಿಟ್ಟರ್ ನಲ್ಲೇ ಅಧ್ಯವಾದ ಅಪ್ರಿಸಿದ್ದಾರೆ. ನನ್ನ ಇರುವಿಕೆಯನ್ನು ಗುರುತಿಸಲು ನೀವೆಲ್ಲ ಜೊತೆಗಿದ್ದೀರಿ ಅನ್ನೋದು ಮುಖ್ಯ ಎಂದು ಖಾನ್ ಟ್ವೀಟ್ ಮಾಡಿದ್ದಾರೆ. ಶಾರುಖ್ ನಂತ್ರ ಅಮೀರ್ ಖಾನ್ 14.4 ಮಿಲಿಯನ್ ಹಾಗೂ ಸಲ್ಮಾನ್ ಖಾನ್ 13.7 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. 
 
ಟ್ವಿಟ್ಟರ್ ನಲ್ಲಿ ಸೆಲೆಬ್ರಿಟಿಗಳು ತಮ್ಮ ಚಿತ್ರೀಕರಣದ ಮಾಹಿತಿ,  ಚಿತ್ರಗಳನ್ನ, ವಿಡಿಯೋಗಳನ್ನ ಆಗಾಗ ಹಾಕಿಕೊಂಡು ಅಭಿಮಾನಿಗಳ ಕ್ಯೂರಿಯಾಸಿಟಿಯನ್ನ ತಣಿಸುತ್ತಿರುತ್ತಾರೆ. ಅಲ್ಲದೆ ಪ್ರಮುಖ ವಿದ್ಯಮಾನಗಳು ನಡೆದಾಗ ತಕ್ಷಣವೇ ಅದಕ್ಕೆ ಸ್ಪಂದಿಸಿ ನಾವು ಕೂಡಾ ನಿಮ್ಮೊಂದಿಗಿದ್ದೇವೆ ಅನ್ನೇ ಸಂದೇಶ ಕೊಡ್ತಾರೆ. ಹೀಗಾಗಿಯೇ ಬಿಟೌನ್ ನ ಸೆಲೆಬ್ರಿಟಿಗಳಿಗೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಫಾಲೋವರ್ಸ್ ಗಳಿದ್ದಾರೆ. 

Share this Story:

Follow Webdunia kannada