ಐ ಲವ್ ಯೂ ಪಾತ್ರಗಳ ಬಗ್ಗೆ ಕಿಚ್ಚನಿಗೇ ಕುತೂಹಲ!

Webdunia
ಗುರುವಾರ, 6 ಜೂನ್ 2019 (13:46 IST)
ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಐ ಲವ್ ಯೂ ಚಿತ್ರವೀಗ ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಅಗಾಧವಾದ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವಿಶೇಷವೆಂದರೆ, ಉಪ್ಪಿ, ನಾಯಕಿಯರಾದ ರಚಿತಾ ರಾಮ್ ಮತ್ತು ಸೋನು ಗೌಡ ಪಾತ್ರಗಳ ಬಗ್ಗೆಯೂ ಜನ ತಲೆ ಕೆಡಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರೋ ಎರಡು ಟ್ರೈಲರ್ ಮೂಲಕ ಎಲ್ಲವನ್ನೂ ಹೇಳಿದಂತೆ ಮಾಡಿ ಏನನ್ನೂ ಹೇಳದಂಥಾ ಟ್ರಿಕ್ಸು ಅನುಸರಿಸೋ ಮೂಲಕ ಚಂದ್ರು ಇಂಥಾ ಕುತೂಹಲವನ್ನು ಕಾಪಿಟ್ಟುಕೊಂಡಿದ್ದಾರೆ.
ಬೇರೆಯವರ ಕಥೆ ಹಾಗಿರಲಿ, ಖುದ್ದು ಕಿಚ್ಚ ಸುದೀಪ್ ಅವರೇ ಐ ಲವ್ ಯೂ ಪಾತ್ರಗಳ ಬಗ್ಗೆ ಕುತೂಹಲಗೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಎರಡನೇ ಟ್ರೈಲರ್ ಅನ್ನು ಸುದೀಪ್ ಬಿಡುಗಡೆಗೊಳಿಸಿದ್ದರು. ಈ ಸಂರ್ಭದಲ್ಲಿ ಅದರಲ್ಲಿದ್ದ ಕೆಲ ಪಾತ್ರಗಳ ಬಗ್ಗೆ ಕುತೂಹಲದ ಮಾತಾಡಿದ್ದರು. ಉಪ್ಪಿ ಸೇರಿದಂತೆ ಎಲ್ಲರ ಪಾತ್ರಗಳ ನಿಜವಾದ ಸ್ವರೂಪದ ಬಗ್ಗೆ ತಾವೂ ಕಾತರರಾಗಿರೋದಾಗಿ ಹೇಳಿಕೊಂಡಿದ್ದರು.
ಅದರಲ್ಲಿಯೂ ಸೋನು ಗೌಡ ಪಾತ್ರವನ್ನಂತೂ ಕಿಚ್ಚಾ ಬಹುವಾಗಿ ಮೆಚ್ಚಿಕೊಂಡಿದ್ದರು. ಟ್ರೈಲರಿನಲ್ಲಿ ಸಿಕ್ಕಿರೋ ಸಣ್ಣ ಝಲಕ್ಕಿನಲ್ಲಿಯೇ ಸೋನು ಗೌಡ ಚೆಂದಗೆ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ವಿಶೇಷವಾಗಿಯೇ ಇದ್ದಂತಿದೆ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರು. ಸೋನು ಗೌಡ ಇಲ್ಲಿ ಗೃಹಿಣಿಯ ಪಾತ್ರದಲ್ಲಿ ನಟಿಸಿದ್ದಾರೆಂಬ ಸುಳಿವಷ್ಟೇ ಹೊರ ಬಿದ್ದಿದೆ. ಆದರೆ ಆ ಪಾತ್ರಕ್ಕೆ ನಾನಾ ಶೇಡುಗಳಿವೆಯಂತೆ. ಇನ್ನುಳಿದಂತೆ ರಚಿತಾ ರಾಮ್ ಪಾತ್ರವೂ ಹೀಗೇ ಇರಬಹುದೆಂದು ಜನ ಅಂದುಕೊಂಡಿದ್ದಾರೆ. ಆದರೆ ರಚಿತಾ ಪಾತ್ರವೂ ಕೂಡಾ ಪ್ರೇಕ್ಷಕರಿಗೆ ನಾನಾ ಅಚ್ಚರಿಗಳನ್ನು ಕಾಯ್ದಿಟ್ಟುಕೊಂಡಿದೆಯಂತೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments