Select Your Language

Notifications

webdunia
webdunia
webdunia
webdunia

ಲವ್ ಯು ಆಲಿಯಾದಲ್ಲಿ ಸಂಭಾವನೆ ಇಲ್ಲದೆ ನಟಿಸಲಿರುವ ಕಿಚ್ಚ...?!

ಲವ್ ಯು ಆಲಿಯಾದಲ್ಲಿ ಸಂಭಾವನೆ ಇಲ್ಲದೆ ನಟಿಸಲಿರುವ ಕಿಚ್ಚ...?!
, ಶುಕ್ರವಾರ, 27 ಮಾರ್ಚ್ 2015 (10:03 IST)
ಮತ್ತೊಮ್ಮೆ ಎರಡು ತಾರೆಗಳು ಒಟ್ಟಿಗೆ ಸೇರಿ ಕೆಲಸ ಮಾಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆಯಲು ಸಿದ್ಧರಾಗಿದ್ದಾರೆ. ಸುದೀಪ್ ಹದಿನಾಲ್ಕು ವರ್ಷಗಳ ಬಳಿಕ ಈಗ ಮತ್ತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ  ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಹದಿನಾಲ್ಕು ವರ್ಷಗಳ ಹಿಂದೆ ಅವರು ತುಂಟಾಟ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಚಿತ್ರದಲ್ಲಿ ಕಂಡು ಬಂದಿದ್ದರು. ಈಗ ಲವ್ ಯು ಅಲಿಯ ಚಿತ್ರದಲ್ಲಿ ಕಾಣಸಿಗುತ್ತಿದ್ದಾರೆ. 
ತಂದೆ ಮಗಳ ನಡುವಿನ ಬಾಂಧವ್ಯದ ಬಗ್ಗೆ ಇರುವ ಕಥೆಯನ್ನು ಈ ಚಿತ್ರ ಹೊಂದಿದೆ. ಸ್ಟಾರ್ ಮತ್ತು ತಂದೆ ಎರಡು ಮನೋಭಾವದ ಪಾತ್ರವನ್ನು ಮಾಡಲಿದ್ದಾರೆ ಸುದೀಪ್ ಅವರು. ಕಿಚ್ಚರನ್ನು ಹೊರೆತು ಪಡಿಸಿ ಯಾರಿಗೂ ಆ ಪಾತ್ರ ಮಾಡಲು ಸಾಧ್ಯವಾಗದ ಕಾರಣ ಅಂತಿಮವಾಗಿ ಅವರು ಈ ಚಿತ್ರದ ನಿರ್ದೇಶಕ ಇಂದ್ರಜಿತ್ ಇವರನ್ನೇ ಆಯ್ಕೆ ಮಾಡಿದ್ದಾರಂತೆ.  
 
 ಸುದೀಪ್ ತಮ್ಮ ಪಾತ್ರದ ಬಗ್ಗೆ ನನ್ನನ್ನು ಪ್ರಶ್ನಿಸದೆ ನಟಿಸಲು ಒಪ್ಪಿದರು. ಅಷ್ಟೇ ಅಲ್ಲದೆ ಅವರು ಒಂದು ಬಿಡಿಗಾಸು ಸಂಭಾವನೆ ತೆಗೆದು ಕೊಂಡಿಲ್ಲ ಎಂದು ಇಂದ್ರಜಿತ್ ಹೇಳಿದ್ದಾರೆ. ತಂದೆ ಮಗಳ ನಡುವಿನ ಅನುಬಂಧದ ಬಗ್ಗೆ ಕೇಳಿ ಸುದೀಪ್ ಅವರಿಗೆ ಸಕತ್ ಖುಷಿ ಆಯ್ತು ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಅವರು ತುಂಬಾ ಎಮೋಷನಲ್ ಆಗಿ ನಟಿಸಿದ್ದಾರೆ ಎಂದಿದ್ದಾರೆ ಇಂದ್ರಜಿತ್. 

Share this Story:

Follow Webdunia kannada