Webdunia - Bharat's app for daily news and videos

Install App

ಭವಿಷ್ಯದಲ್ಲಿ ಬೇಡಿಕೆ ಕಡಿಮೆ ಮಾಡಿಕೊಳ್ಳಲಿರುವ ಕತ್ರಿನಾ

Webdunia
ಸೋಮವಾರ, 27 ಏಪ್ರಿಲ್ 2015 (10:22 IST)
ಈಗ ಬಾಲಿವುಡ್ ನಲ್ಲಿ ನಟಿ ಕತ್ರಿನಾ ಕೈಫ್ ಳದ್ದೇ ಹವಾ. ಆಕೆಯ ಇದ್ದ ಕಡೆ ಯಶದ ಮಳೆ ಸುರಿಯುತ್ತಿದೆ. ಆದರೆ ಆ ರೀತಿಯ ಒಂದು ಹವಾ ಹೆಚ್ಚುಕಾಲ ಇರದು ಎನ್ನುವ ಮಾತನ್ನು ಬಾಲಿವುಡ್ ಪಂಡಿತರು ಹೇಳುತ್ತಿದ್ದಾರೆ. ಆಕೆಯ ಸ್ಟಾರ್ ಡಂ ಇನ್ನು ಕೇವಲ ಎರಡು ಮೂರು ವರ್ಷಗಳಲ್ಲಿ ಕಡಿಮೆ ಆಗುತ್ತದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. 
ಅದಕ್ಕೆ ಮುಖ್ಯ ಕಾರಣ ಆಕೆ ಕೆಲವು ವರ್ಷಗಳಿಂದ ರಣಬೀರ್ ಕಪೂರ್ ಅವರ ಜೊತೆ ಪ್ರಣಯದಲ್ಲಿ ತನ್ನ ಹೆಚ್ಚು ಸಮಯವನ್ನು ತೊಡಗಿಸಿಕೊಂಡಿರುವುದಾಗಿದೆ.ಈ ಕಾರಣದಿಂದ ಅನೇಕ ಹೀರೋಗಳು, ನಿರ್ಮಾಪಕರು ಮತ್ತು ನಿರ್ದೇಶಕರುಗಳ ಜೊತೆ ಆಕೆಯ ಬಾಂಧವ್ಯದಲ್ಲಿ ವ್ಯತ್ಯಾಸ ಆಗುತ್ತಿದೆ. ಇದು ಅವರ ನಡುವೆ ಅಂತರ ಹೆಚ್ಚಿಸುತ್ತಿದೆ. 
 
ಈಗಂತೂ ಕತ್ರಿನಾ ಯಾವ ವಿಷಯದ ಬಗ್ಗೆ ಚಿಂತೆ ಮಾಡಿದರೂ ಅದರಲ್ಲಿ ರಣಬೀರ್ ಇರಲೇ ಬೇಕಾಗಿದೆ. ಆಕೆಗೆ ಅವಕಾಶಗಳು ಕಡಿಮೆ ಆಗಲು ರಣಬೀರ್ ಇದೂ ಕಾರಣವಾಗುತ್ತದೆ ಎನ್ನುವುದು ವಿಶ್ಲೇಷಕರ ಮಾತಿನ ಮರ್ಮ. ಇನ್ನು ವಿಶೇಷ ಸಂಗತಿ ಎಂದರೆ ಕತ್ರಿನಾ ತನಗಿಂತ ಚಿಕ್ಕ ವಯೋಮತಿಯನ್ನು ಹೊಂದಿರುವವರ ಜೊತೆ ನಟಿಸಲು ಇಷ್ಟ ಪಡುತ್ತಿದ್ದಳಂತೆ. ಅದೇರೀತಿ ಅವರ ಜೊತೆ ಡೇಟಿಂಗ್ ಮಾಡಲು ಆಕೆ ಆಶಿಸುತ್ತಿದ್ದಾಳಂತೆ. 
 
ಈಗ ಆಕೆ ನಟಿಸುತ್ತಿರುವ ಚಿತ್ರಗಳ ಹೀರೋಗಳು ಆಕೆಗಿಂತ ಕಿರಿಯರು. ಈ ಎಲ್ಲಾ ಕಾರಣದಿಂದ ಆಕೆ ಇನ್ನು ಮುಂದೆ ತನಗಿಂತ ಕಿರಿಯರ ಜೊತೆ ಮಾತ್ರ ನಟಿಸಲು ಆಶಿಸುತ್ತಿದ್ದಾಳಂತೆ. ಜಗೂ ಜಾಸೂಸ್ ನಲ್ಲಿ ರಣಬೀರ್ ಕಪೂರ್ ಹಾಗೂ ಫಿತೂರ್ ನಲ್ಲಿ  ಆದಿತ್ಯ ರಾಯ್ ಕಪೂರ್ ಜೊತೆ ಆಕೆ ಅಭಿನಯಿಸಿದ್ದಾಳೆ.ಆ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಅದೇ ರೀತಿ ನಿತ್ಯ ಮೆಹ್ರಾ ನಿರ್ದೇಶನದಲ್ಲಿ ಸಿದ್ಧಾರ್ಥ್ ಮಲ್ಹೋತ್ರ  ಜೊತೆ ಆಕೆ ಅಭಿನಯಿಸುತ್ತಿದ್ದಾಳೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments