Select Your Language

Notifications

webdunia
webdunia
webdunia
webdunia

ರಣ್‌ಬೀರ್ ಕಪೂರ್‌ಗೆ ಕತ್ರೀನಾ ಕೈಫೇ ಸೂಕ್ತ: ಕರೀನಾ

ರಣ್‌ಬೀರ್ ಕಪೂರ್‌ಗೆ ಕತ್ರೀನಾ ಕೈಫೇ ಸೂಕ್ತ: ಕರೀನಾ
, ಗುರುವಾರ, 3 ಸೆಪ್ಟಂಬರ್ 2015 (09:42 IST)
ರಣ್ ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಬಾಲಿವುಡ್  ಜೋಡಿ ಹಕ್ಕಿಗಳು. ಇವರಿಬ್ಬರ ಪ್ರೇಮ ಪುರಾಣದ ಬಗ್ಗೆ ದಿನಕ್ಕೊಂದು ಚರ್ಚೆಯಾಗುತ್ತಲೇ ಇರುತ್ತದೆ. ಮೊನ್ನೆ ಮೊನ್ನೆಯಷ್ಟೇ ಇವರಿಬ್ಬರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ಸುದ್ದಿಯಾಗಿತ್ತು. ಮತ್ತೊಮ್ಮೆ  ಅತೀ ಬೇಗ ಮದುವೆಯಾಗುತ್ತಾರೆ ಎಂದು ಗುಲ್ಲೆದಿತ್ತು. ಹೀಗಿರುವಾಗಲೇ ಕರೀನಾ ತನ್ನ ನಾದಿನಿಯ ಬಗ್ಗೆ ಪ್ರತಿಕ್ರಿಯಿದ್ದಾರೆ.
ರಣ್ ಬೀರ್ ಹಾಗೂ ಕತ್ರೀನಾ ಕೈಫ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕರೀನಾ ಕಪೂರ್ ಕ್ಯಾಟ್ ರಣ್ ಬೀರ್ ಕಪೂರ್ ಗೆ ಸರಿಯಾದ ಜೋಡಿ ಎಂದಿದ್ದಾರೆ. ಕತ್ರೀನಾ ಬಾರ್ಬಿ ಡಾಲ್ ಇದ್ದಂತೆ ಅಂತಾ ಹಾಡಿ ಹೊಗಳಿದ್ದಾರೆ. ಜೊತೆಗೆ ರಣ್ ಬೀರ್ ಕಪೂರ್ ಅವರದ್ದು ಸರಿಯಾದ ಆಯ್ಕೆ ಎಂದಿದ್ದಾರೆ.
 
ಈ ಹಿಂದೆಯೂ ಬೆಬೋ ಟಿವಿ ಕಾರ್ಯಕ್ರಮವೊಂದರಲ್ಲಿ  ಕತ್ರೀನಾ ನನ್ನ ನಾದಿನಿ ಎಂದು ಹೇಳಿಕೊಂಡಿದ್ದರು. ಅಲ್ಲದೇ ಕ್ಯಾಟ್ ಹಾಗೂ ರಣ್ ಬೀರ್ ಮದುವೆಯಲ್ಲಿ ಕತ್ರೀನಾ ಆಕ್ಟ್ ಮಾಡಿದ ಸಿನಿಮಾವೊಂದರ ಸ್ಪೆಷಲ್ ಹಾಡಿಗೆ ನಾನು ಹೆಜ್ಜೆ ಹಾಕೋದಾಗಿ ಹೇಳಿದ್ದರು. ಇದನ್ನೆಲ್ಲಾ ನೋಡುತ್ತಿದ್ರೆ ಕರೀನಾಗೆ ಕತ್ರೀನಾ ತುಂಬಾನೇ ಇಷ್ಟವಾಗಿದ್ದಾರೆ ಅನ್ನೋದು ಗೊತ್ತಾಗುತ್ತೆ.

Share this Story:

Follow Webdunia kannada