Webdunia - Bharat's app for daily news and videos

Install App

ಫತೇಪುರ್ ಸಿಕ್ರಿಗೆ ಭೇಟಿ ನೀಡಿದ ಕತ್ರೀನಾ ಕೈಫ್

Webdunia
ಬುಧವಾರ, 10 ಫೆಬ್ರವರಿ 2016 (10:59 IST)
ಮೊನ್ನೆಯಷ್ಟೇ ಫಿತೂರ್ ಸಿನಿಮಾದ ಪ್ರಮೋಷನ್ ಗಾಗಿ ಸಿನಿಮಾದ ನಾಯಕ ಆದಿತ್ಯಾ ರಾಯ್ ಕಪೂರ್ ಹಾಗೂ ಕತ್ರೀನಾ ಕೈಫ್ ದೆಹಲಿಯ ಬೀದಿಗಳಲ್ಲಿ ಸುತ್ತಾಡಿದ್ರು. ಇದೀಗ ಕತ್ರೀನಾ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಲು ಧಾರ್ಮಿಕ ಕ್ಷೇತ್ರಗಳಲ್ಲಿ ಭೇಟಿ ನೀಡುತ್ತಿದ್ದಾರೆ.
 

 
ಪ್ರತಿ ಬಾರಿಯ ಸಿನಿಮಾ ತಾರೆಯರು ತಮ್ಮ ಸಿನಿಮಾಗಳು ರಿಲೀಸ್ ಗೆ ರೆಡಿಯಾಗುತ್ತಿದ್ದಂತೆ ಅವರಿಷ್ಟದ ದೇಗುಲಕ್ಕೋ , ಇಲ್ಲಾ ಮಸೀದಿ, ಚರ್ಚ್ ಗಳಿಗೋ ಹೋಗೋದು ಮಾಮೂಲಿ. ಇದೀಗ ಕತ್ರೀನಾ ಕೈಫ್ ಅಭಿನಯದ ಫಿತೂರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹಾಗಾಗಿ ಕ್ಯಾಟ್ ಕೂಡ ತಮ್ಮ ಸಿನಿಮಾಗೆ ಯಶಸ್ಸು ಸಿಗಲಿ ಅಂತಾ ದೇವರ ಮೊರೆ ಹೋಗಿದ್ದಾರೆ. ಮೊನ್ನೆ  ಫತೇಪುರ್ ಸಿಕ್ರಿಗೆ ಭೇಟಿ ನೀಡಿದ ಕತ್ರೀನಾ ಕೈಫ್ ದೇವರ ಆರ್ಶೀವಾ ಪಡೆದ್ರು. ಅಲ್ಲದೇ ಸಿನಿಮಾದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.
 
ಅಂದ್ಹಾಗೆ ಕತ್ರೀನಾ ಕೈಫ್ ಫತೇಪುರ್ ಸಿಕ್ರಿಗೆ ಭೇಟಿ ನೀಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಐದದು ಬಾರಿ ಕತ್ರೀನಾ ತಮ್ಮ ಬೇರೆ ಬೇರೆ ಸಿನಿಮಾಗಳು ರಿಲೀಸ್ ಗೆ ರೆಡಿಯಾದಾಗ ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕತ್ರೀನಾ ಹಾಗೂ ಆದಿತ್ಯಾ ರಾಯ್ ಕಪೂರ್ ಅಭಿನಯದ ಫಿತೂರ್ ಸಿನಿಮಾ ಇದೇ ತಿಂಗಳ 12 ರಂದು ವಿಶ್ವದಾದ್ಯಂತ ರಿಲೀಸ್ ಆಗ್ತಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments