Select Your Language

Notifications

webdunia
webdunia
webdunia
webdunia

ಮೂರು ದಿನಗಳಲ್ಲಿ ಕಸ್ತೂರಿ ನಿವಾಸ ಗಳಿಸಿದ ಮೊತ್ತ ಎಷ್ಟು ಗೊತ್ತೇ ?

ಮೂರು ದಿನಗಳಲ್ಲಿ ಕಸ್ತೂರಿ ನಿವಾಸ ಗಳಿಸಿದ ಮೊತ್ತ ಎಷ್ಟು ಗೊತ್ತೇ ?
bangalore , ಬುಧವಾರ, 12 ನವೆಂಬರ್ 2014 (12:48 IST)
ಕನ್ನಡ ಚಿತ್ರರಂಗದ ಅಪರೂಪದ ಚಿತ್ರ ಕಸ್ತೂರಿ ನಿವಾಸ. ಡಾ. ರಾಜ್ ಕುಮಾರ್, ಅಭಿನಯ ಶಾರದೆ ಜಯಂತಿ ಹಾಗು ಆರತಿ ನಟಿಸಿದ್ದ ,43 ವರ್ಷಗಳ  ಹಿಂದೆ ಬಿಡುಗಡೆ ಆಗಿದ್ದ ಈ ಕಪ್ಪು ಬಿಳುಪಿನ ಚಿತ್ರ ಈಗ ಬಣ್ಣದಿಂದ ಕಂಗೊಳಿಸುತ್ತಿದೆ.
 
 ಈ ಚಿತ್ರಕ್ಕೆ ಬಣ್ಣದ ಕಳೆ ತುಂಬಿ ಮತ್ತೊಮ್ಮೆ ಜನರ ಮುಂದೆ ತಂದಿದ್ದಾರೆ ಕೆ ಸಿಎನ್ ಮೋಹನ್. ಈ ಬಗ್ಗೆ ನಾವು ಈ ಮೊದಲು ತಿಳಿಸಿದ್ದೆವು. ಈ ಚಿತ್ರ ಮತ್ತೊಮ್ಮೆ ಶುಕ್ರವಾರ ಬಿಡುಗಡೆ ಆಯಿತು. ಚಿತ್ರಕ್ಕೆ ಬಣ್ಣ ತುಂಬಲು ಬರೋಬ್ಬರಿ ಎರಡು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ನಿರ್ಮಾಪಕರು. 
 
ಆದರೆ ಇದು ಬಿಡುಗಡೆ ಆದ ಬಳಿಕ ದೊರೆತ ಮೊತ್ತ ಎಲ್ಲರನ್ನು ಖುಷಿಯ ಕಡಲಲ್ಲಿ ಮೀಯಿಸಿದೆ. ಏಕೆಂದರೆ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ದೊರೆತ  ಕಲೆಕ್ಷನ್ ಒಟ್ಟು 1 .5  ಕೋಟಿ ರೂಪಾಯಿಗಳು. ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ , ಫೇಸ್ ಬುಕ್ ಮುಂತಾದವನ್ನು ಬಳಕೆ ಮಾಡಿಕೊಂಡು ಪ್ರಚಾರ ಮಾಡಲಾಗಿತ್ತು. 
 
ಒಟ್ಟಾರೆ ಅಂತರ್ಜಾಲದಲ್ಲಿ ಸಾಕಷ್ಟು ಪ್ರಚಾರ ಮಾಡಿದ ಚಿತ್ರವೂ ಈಗ ಉತ್ತಮ ಫಲಿತಾಂಶ ನೀಡಿದೆ. ವಾಟ್ಸ್ ಅಪ್ ನಲ್ಲಿ ಕಸ್ತೂರಿ ನಿವಾಸದ ಡಾ. ರಾಜ್ ಕುಮಾರ್ ಅವರ ಫೋಟೋಗಳನ್ನು ಸಹಿತ ಅಪ್ಲೋಡ್ ಮಾಡಲಾಗಿತ್ತು. 
 
ಆರಂಭಿಕ ಹಂತದಲ್ಲೇ ಇಷ್ಟೆಲ್ಲಾ ಹಣ ಗಳಿಸಿರುವ ಕಸ್ತೂರಿ ನಿವಾಸ ಮತ್ತಷ್ಟು ದಾಖಲೆ ಮಾಡಿ ಹಳೆಯ ಚಿತ್ರಗಳ ಪ್ರಾಮುಖ್ಯತೆ ತೋರುವಲ್ಲಿ ಮುಂದಿದೆ. ಜನಕ್ಕೆ ಹೊಸ ಚಿತ್ರಗಳ ಲಾಂಗಿಗಿಂತ ಹಳೆಯ ಚಿತ್ರಗಳ ಪಾರಿವಾಳ ಇಷ್ಟ ಆಯ್ತು ಎಂದಾಯ್ತಲ್ಲವೇ! 
 

Share this Story:

Follow Webdunia kannada