Select Your Language

Notifications

webdunia
webdunia
webdunia
webdunia

ಎರಡು ಕನಸು ಚಿತ್ರದಲ್ಲಿ ಕಾರುಣ್ಯ ರಾಮ್‌ಗೆ ಅವಕಾಶ.

ಎರಡು ಕನಸು ಚಿತ್ರದಲ್ಲಿ ಕಾರುಣ್ಯ ರಾಮ್‌ಗೆ ಅವಕಾಶ.
, ಶುಕ್ರವಾರ, 30 ಜನವರಿ 2015 (09:58 IST)
ಕಾರುಣ್ಯ ರಾಮ್  ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾಳೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಅಭಿನಯದ ಚಿತ್ರ ವಜ್ರಕಾಯದಲ್ಲಿ ನಟಿಸಲೆಂದು. ಆ ಚಿತ್ರವನ್ನು ಹರ್ಷ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗ ಆಕೆಗೆ ಮತ್ತೊಂದು ಅವಕಾಶ ಸಿಕ್ಕಿದೆ, ವಿಜಯ್ ರಾಘವೇಂದ್ರ ಅಭಿನಯದ ಚಿತ್ರದಲ್ಲಿ ಅಭಿನಯಿಸಲು ಆಕೆ ಅವಕಾಶ ಪಡೆದಿದ್ದಾಳೆ. ಡಾ.ರಾಜ್ ಅವರ ಚಿತ್ರದಲ್ಲಿ ಮಂಜುಳಾ ಮತ್ತು ಕಲ್ಪನ  ನಟಿಸಿದ್ದರು. 
ಈ ಚಿತ್ರ ರೀಮೇಕ್ ಮಾಡುತ್ತಿಲ್ಲ,  ಹಳೆಯ ಹೆಸರನ್ನು ಬಳಕೆ ಮಾಡಿಕೊಂಡಿದ್ದೇವೆ. ಈ ಚಿತ್ರಕಥೆ ಮೈಸೂರಿಗೆ ಸಂಬಂಧ ಪಟ್ಟಿದೆ, ಇಲ್ಲಿ ನಾನು ಬಬ್ಲಿ  ಪಾತ್ರ ಮಾಡುತ್ತಿದ್ದೇನೆ. ತುಂಬಾ ಮಾತಾಡುವ ಹೋಮ್ಲಿ ಹುಡುಗಿ. ಈ ಪಾತ್ರ ನನ್ನ ವಜ್ರಕಾಯ ಪಾತ್ರಕ್ಕೆ ಕಾಂಟ್ರಾಸ್ಟ್  ಆಗುತ್ತದೆ ಎಂದು ಹೇಳಿದ್ದಾಳೆ ಈ ಚೆಲುವೆ. ಈ ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ರಾಘು  ಈಗ ಒಪ್ಪಿಕೊಂಡಿರುವ ಕೆಲಸಗಳು ಪೂರ್ಣವಾದ ಬಳಿಕ ಚಿತ್ರೀಕರಣ ಆರಂಭವಾಗುತ್ತದೆ ಎಂದು ಹೇಳಿದ್ದಾಳೆ ಈ ಭಾಮೆ. ಪ್ರಸ್ತುತ ತಮಿಳು ಚಿತ್ರಗಳಲ್ಲಿಯೂ ಸಹಿತ ತನ್ನನ್ನು ತೊಡಗಿಸಿ ಕೊಂಡಿರುವ ಕಾರುಣ್ಯ, ಈಗ ಯುವನ್ ಎನ್ನುವ ಹೊಸ ನಟನ ಜೊತೆ ಕೆಲಸ ಮಾಡುತ್ತಿದ್ದಾಳೆ. 
 

Share this Story:

Follow Webdunia kannada