Webdunia - Bharat's app for daily news and videos

Install App

ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರಕಟ: ಕೆ.ವಿ ರಾಜುಗೆ ಪಂತುಲು ಪ್ರಶಸ್ತಿ

Webdunia
ಮಂಗಳವಾರ, 28 ಫೆಬ್ರವರಿ 2017 (08:35 IST)
ಕನ್ನಡದ ಮೊದಲ ಮಾತನಾಡುವ ಚಿತ್ರ ‘ಸತಿ ಸುಲೋಚನ’ (03.03.1934) ಬಿಡುಗಡೆಗೊಂಡ ಸವಿನೆನಪಿನಲ್ಲಿ ಕರ್ನಾಟಕ ಚಲಚಿತ್ರ ಅಕಾಡೆಮಿ ಕಳೆದ ವರ್ಷದಿಂದ ‘ಕನ್ನಡ ವಾಕ್ಚಿತ್ರ ಹುಟ್ಟುಹಬ್ಬ’ ಆಚರಿಸುತ್ತಾ ಬಂದಿದೆ. ಈ ಸಂದರ್ಭದಲ್ಲಿ ಕನ್ನಡ ಚಲಚಿತ್ರ ಅಭಿವೃದ್ಧಿಗಾಗಿ ಶ್ರಮಿಸಿದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರುತಿಸಿ, ಅಂತಹ ಮಹನೀಯರಿಗೆ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುವ ಪರಿಪಾಠವನ್ನು ಆರಂಭಿಸಲಾಗಿದೆ. 
 
ಕಳೆದ ವರ್ಷ ಹತ್ತು ಮಂದಿಯನ್ನು ಪ್ರಶಸ್ತಿಗೆ ಆರಿಸಲಾಗಿದ್ದರೆ, ಈ ಬಾರಿ ಹದಿನೈದು ಮಂದಿ ಸಾಧಕರನ್ನು ಗುರ್ತಿಸಲಾಗಿದೆ. ಪ್ರತಿ ಪ್ರಶಸ್ತಿಯನ್ನೂ ಆಯಾ ವಿಭಾಗದಲ್ಲಿ ಸಾಧನೆ ಮಾಡಿ, ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗಾಗಿ ಕಾಣಿಕೆ ನೀಡಿದ ಮಹನೀಯರ ಹೆಸರಿನಲ್ಲಿ ನೀಡುತ್ತಿರುವುದು ವಿಶೇಷವಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 50,000 ರೂ ನಗದು ಬಹುಮಾನ ನೀಡಲಾಗುವುದಲ್ಲದೆ, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ನೀಡಿ ಸತ್ಕರಿಸಲಾಗುವುದು. 
 
ಕರ್ನಾಟಕ ಚಲಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಅಕಾಡೆಮಿ ಸದಸ್ಯ ಮಂಡಲಿ ಈ ಪ್ರಶಸ್ತಿಗಳನ್ನು ಅಂತಿಮಗೊಳಿಸಿದೆ. ಬೆಂಗಳೂರಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ 2017ರ ಮಾರ್ಚ್ 3ರಂದು (ಶುಕ್ರವಾರ) ಸಂಜೆ 6 ಗಂಟೆಗೆ ಸಂಜೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ  ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿರುವ ‘ಕನ್ನಡ ವಾಕ್ಚಿತ್ರ ಹುಟ್ಟುಹಬ್ಬ’ ಸಮಾರಂಭದಲ್ಲಿ ವಸತಿ ಸಚಿವರಾದ ಎಂ.ಕೃಷ್ಣಪ್ಪ ಮತ್ತು ಹಿರಿಯ ಕಲಾವಿದರೂ ಹಾಗೂ ಮಾಜಿ ಸಚಿವರೂ ಆದ ಅಂಬರೀಷ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡುವರು. 
 
ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೇಯ ಸಚಿವರಾದ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಡಾ.ಜಯಮಾಲ, ಹಿರಿಯ ಕಲಾವಿದೆ ಡಾ.ಭಾರತಿ ವಿಷ್ಣುವರ್ಧನ್, ಹಿರಿಯ ಕಲಾವಿದರಾದ ವಿ.ರವಿಚಂದ್ರನ್, ವಾರ್ತಾ ಮತ್ತು 
ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾ.ರಾ.ಗೋವಿಂದು ಮುಖ್ಯ ಅತಿಥಿಗಳಾಗಿರುತ್ತಾರೆ. 
 
ಕರ್ನಾಟಕ ಚಲಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು ಸಮಾರಂಭದ ಅಧ್ಯಕ್ಷತೆವಹಿಸುವರು. ಅರ್ಚನಾ ಉಡುಪ ತಂಡದವರಿಂದ ಸ್ಮೃತಿ ಗೀತಗಾಯನ ಕಾರ್ಯಕ್ರಮವಿದೆ.
 
ಪ್ರಶಸ್ತಿಗಳ ವಿವರ:
 
1 ಆರ್.ನಾಗೇಂದ್ರರಾವ್ ಪ್ರಶಸ್ತಿ- ಅಭಿನಯ (ನಟ)-ಜೆ.ಕೆ.ಶ್ರೀನಿವಾಸಮೂರ್ತಿ 
 
2 ಎಂ.ವಿ.ರಾಜಮ್ಮ ಪ್ರಶಸ್ತಿ-ಅಭಿನಯ (ನಟಿ)- ಆದವಾನಿ ಲಕ್ಷ್ಮಿದೇವಿ 
 
3 ಟಿ.ಎನ್.ಬಾಲಕೃಷ್ಣ ಪ್ರಶಸ್ತಿ-ಅಭಿನಯ (ಹಾಸ್ಯ ಪಾತ್ರ)-ಎಂ.ಎಸ್.ಉಮೇಶ್ 
 
4 ತೂಗುದೀಪ ಶ್ರೀನಿವಾಸ್ ಪ್ರಶಸ್ತಿ-ಅಭಿನಯ (ಖಳ ಪಾತ್ರ)- ಎಸ್.ದೊಡ್ಡಣ್ಣ 
 
5 ಬಿ.ಆರ್.ಪಂತುಲು ಪ್ರಶಸ್ತಿ-ನಿರ್ದೇಶನ- ಕೆ.ವಿ.ರಾಜು 
 
6 ಡಿ.ಶಂಕರಸಿಂಗ್ ಪ್ರಶಸ್ತಿ-ನಿರ್ಮಾಣ-ಸಿ.ಜಯರಾಂ 
 
7 ಬಿ.ಜಯಮ್ಮ ಪ್ರಶಸ್ತಿ-ಪ್ರದರ್ಶನ-ಕುಮಾರ್ ಶೆಟ್ಟರ್ 
 
8 ಎನ್.ವೀರಾಸ್ವಾಮಿ ಪ್ರಶಸ್ತಿ-ಹಂಚಿಕೆ-ಪಾಲ್ ಎಸ್.ಚಂದಾನಿ 
 
9 ಜಿ.ವಿ.ಅಯ್ಯರ್ ಪ್ರಶಸ್ತಿ-ಸಂಗೀತ/ಗಾಯನ-ಬಿ.ಕೆ.ಸುಮಿತ್ರಾ 
 
10 ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ-ಚಿತ್ರಸಾಹಿತ್ಯ-ಡಾ.ಬಿ.ಎಲ್.ವೇಣು 
 
11 ಬಿ.ಎಸ್.ರಂಗ ಪ್ರಶಸ್ತಿ-ಛಾಯಾಗ್ರಹಣ-ಎಸ್.ವಿ.ಶ್ರೀಕಾಂತ್ 
 
12 ಪಂಡರೀಬಾಯಿ ಪ್ರಶಸ್ತಿ-ಅಭಿನಯ (ಪೋಷಕ ಪಾತ್ರ)-ಬಿ.ವಿ.ರಾಧಾ 
 
13 ಎಂ.ಪಿ.ಶಂಕರ್ ಪ್ರಶಸ್ತಿ-ತಂತ್ರಜ್ಞಾನ- ದೇವಿ (ನೃತ್ಯ) 
 
14 ಶಂಕರನಾಗ್ ಪ್ರಶಸ್ತಿ-ಕಾರ್ಮಿಕ ವಿಭಾಗ- ಎನ್.ಎಲ್.ರಾಮಣ್ಣ (ನಿರ್ಮಾಣ ನಿರ್ವಾಹಕ) 
 
15 ಕೆ.ಎನ್.ಟೈಲರ್ ಪ್ರಶಸ್ತಿ-ದೇಶಿಕ ಭಾಷಾ ಚಿತ್ರ- ರಾಮ್ ಶೆಟ್ಟಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments