Select Your Language

Notifications

webdunia
webdunia
webdunia
webdunia

ಐಟಂಸಾಂಗ್‌ನಲ್ಲಿ ಹೆಜ್ಜೆ ಹಾಕಲು ಕರೀನಾ ಪಡೆದಿದ್ದು ಎರಡು ಕೋಟಿ

ಐಟಂಸಾಂಗ್‌ನಲ್ಲಿ ಹೆಜ್ಜೆ ಹಾಕಲು ಕರೀನಾ ಪಡೆದಿದ್ದು ಎರಡು ಕೋಟಿ
, ಮಂಗಳವಾರ, 7 ಜುಲೈ 2015 (10:35 IST)
ಸಾಮಾನ್ಯವಾಗಿ ಹಳ್ಳದ ಕಡೆಗೆ ನೀರು ಹರಿವುದು. ಅದೇ ರೀತಿ ಆಗುತ್ತದೆ ಬಾಲಿವುಡ್ ನಲ್ಲಿ ಇರುವ ಹೀರೋಯಿನ್ಗಳ ವಿಷಯದಲ್ಲೂ ಸಹಿತ. ನಟಿ ಕರೀನಾ ಕಪೂರ್ ಹೀರೋಯಿನ್ ಆಗಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ, ಜೊತೆಗೆ ಆಕೆ ಈಗ ಐಟಂ ನಂಬರ್ ನಲ್ಲಿಯೂ ಸಹಿತ ಅಪಾರವಾದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ವಿಷದ ಬಗ್ಗೆ ವಿವರವಾಗಿ ಹೇಳುವುದಾದರೆ, ಕರೀನಾ ಅವರು ಈಗ ಅಕ್ಷಯಕುಮಾರ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಅವರ ಅಭಿನಯದ ಚಿತ್ರ ಬ್ರದರ್ಸ್ ನಲ್ಲಿ ಹಾಟ್ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಒಂದು ಸ್ಪೆಷಲ್ ಸಾಂಗ್ ಮೂಲಕ,  ಮೇರಿ ನಾಮ್ ಮೇರಿ ಎಂದು ಆ ಹಾಡು ಆರಂಭವಾಗುತ್ತದೆ. ಈ ಹಾಡಿಗೆಂದು ಕರೀನಾ ಅವರು ಪಡೆಯುತ್ತಿರುವ ಸಂಭಾವನೆ ಎರಡು ಕೋಟಿ ರೂಪಾಯಿಗಳು.
ಮುಖ್ಯವಾಗಿ ಆ ಹಾಡಿನಲ್ಲಿ ಆಕೆ ಕೇವಲ ಮೂರು ನಿಮಿಷಗಳ ಕಾಲ ಮಾತ್ರ ಕಂಡು ಬರುತ್ತಾರೆ. ಮೂರು ನಿಮಿಷಕ್ಕೆ ಇಷ್ಟೊಂದು  ಬೆಲೆನಾ ಎಂದು  ಬಾಲಿವುಡ್  ಬಡಕಾರ್ಮಿಕ ಆಶ್ಚರ್ಯ ಚಕಿನಾಗಿ ಅದೇ ಸುದ್ದಿ ಮಾತಾಡುತ್ತಿದ್ದಾನೆ, ಆ ವಿಷ್ಯ ಪಕ್ಕಕ್ಕೆ ಇಡೋಣ, ಕರೀನಾ ವಿಷಯಕ್ಕೆ ಬರುವುದಾದರೆ, 
 
ಕರೀನಾ ಆಗಾಗ ಐಟಂ ಸಾಂಗ್ನಲ್ಲಿ ಕಂಡಿದ್ದಾರೆ, ಈ ಹಿಂದೆ ಆಕೆ ಸಲ್ಮಾನ್ ಖಾನ್ ಅವರ ಜೊತೆ ಫೆವಿಕಾಲ್ ಎನ್ನುವ ಐಟಂ ನಂಬರ್ ನಲ್ಲಿ ಕಂಡಿದ್ದರು. ಈಗ ಮೇರಿ ಆಗ್ತಾ ಇದ್ದಾರೆ, ಈ ಹಾಡಿಗೆ ಗಣೇಶ್ ಆಚಾರ್ಯ ಅವರು ಕೊರಿಯಾಗ್ರಫಿ ಮಾಡಿದ್ದಾರೆ. ಈ ಚಿತ್ರ 2011ರಲ್ಲಿ ಬಿಡುಗಡೆಯಾದ ವಾರಿಯರ್ ಎನ್ನುವ ಹಾಲಿವುಡ್  ಚಿತ್ರದ ರೀಮೇಕ್ ಆಗಿದೆ. ಇದು ಆಗಸ್ಟ್ 14 ರಂದು ಜನರ ಮುಂದೆ ಬರಲಿದೆ. ಅಕ್ಷಯ್, ಸಿದ್ಧಾರ್ಥ್ ಜೊತೆ ಜಾಕ್ವೆಲಿನ್ ಸಹಿತ ನಟಿಸಿದ್ದಾರೆ ಈ ಚಿತ್ರದಲ್ಲಿ. 
 

Share this Story:

Follow Webdunia kannada