Select Your Language

Notifications

webdunia
webdunia
webdunia
webdunia

ಯಶಸ್ಸಿನ ಖುಷಿಯಲ್ಲಿ ಕರೀನಾ ಕಪೂರ್

ಯಶಸ್ಸಿನ ಖುಷಿಯಲ್ಲಿ ಕರೀನಾ ಕಪೂರ್
, ಬುಧವಾರ, 5 ಆಗಸ್ಟ್ 2015 (10:04 IST)
ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್ ಅಬಿನಯದ ಭಜರಂಗಿ ಭಾಯ್ ಜಾನ್ ಚಿತ್ರಕ್ಕೆ ವಿಶ್ವದಾದ್ಯಂತ ಪ್ರಶಂಸೆಯ ಸುರಿಮಳೆಯೇ ಸುರಿಯುತ್ತಿದೆ. ಇತ್ತ ಸಿನಿಮಾದ ಯಶಸ್ಸು ಕರೀನಾಗೂ ಅತ್ಯಂತ ಖುಷಿ ಕೊಟ್ಟಿದೆ. ಅಲ್ಲದೇ ಮತ್ತೆ ಬಾಲಿವುಡ್ ನಲ್ಲಿ ಬೆಬೋ ತನ್ನ ಸ್ಥಾನವನ್ನು ಮತ್ತೆ ಭದ್ರ ಪಡಿಸಿಕೊಳ್ಳೋಕೆ ಅವಕಾಶ ಮಾಡಿಕೊಟ್ಟಿದೆ.
ಇನ್ನು ಸಿನಿಮಾದ ಬಗ್ಗೆ ಮಾತನಾಡಿರುವ ಕರೀನಾ ಈ ಸಿನಿಮಾದಲ್ಲಿ ಸಲ್ಲು ಆಕ್ಟಿಂಗ್ ಬಗ್ಗೆ ಕರೀನಾ ತುಂಬಾನೇ ಹಾಡಿ ಹೊಗಳಿದ್ದಾರೆ. ಸಿನಿಮಾದಲ್ಲಿ ಸಲ್ಲು ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಗೋದು ಪಕ್ಕಾ ಎಂದಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ಸಲ್ಲು ಹಾಗೂ ನನ್ನ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ ಎಂದಿದ್ದಾರೆ. ಅಲ್ಲದೇ ಈ ಸಿನಿಮಾವನ್ನು ಕಬೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರಿಗಾಗಿಯೇ ಒಪ್ಪಿಕೊಂಡಿದ್ದೆ ಎಂದಿದ್ದಾರೆ.
 
ಅಂದ್ಹಾಗೆ ಈ ಸಿನಿಮಾ ಕರೀನಾ ವೃತ್ತಿ ಬದುಕಿಗೂ ಅತ್ಯಂತ ಪ್ರಮುಖ ಮಾರ್ಗದರ್ಶನ ನೀಡಿದೆಯಂತೆ. ಹಾಗಾಗಿ ಇನ್ನೆರಡು ವರ್ಷ ಪರ್ಫಾಮೆನ್ಸ್ ಬೇಸ್ಡ್  ಸಿನಿಮಾಗಳಲ್ಲೇ ನಟಿಸುತ್ತಾರಂತೆ. ಈಗಾಗಲೇ ಕರೀನಾ ಅಭಿಷೇಕ್ ಚೌಬೆ ನಿರ್ದೇಶನದ ಉಡ್ತಾ ಪಂಜಾಬ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಆರ್ ಬಾಲ್ಕಿ ನಿರ್ದೇಶನದ ಮುಂದಿನ ಸಿನಿಮಾದಲ್ಲೂ ಕರೀನಾ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಕರೀನಾ ಬಾಲಿವುಡ್ ನಲ್ಲಿ ಮತ್ತೆ ಹೊಸ ಬಿರುಗಾಳಿಯೆಬ್ಬಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Share this Story:

Follow Webdunia kannada