Webdunia - Bharat's app for daily news and videos

Install App

ನಿರ್ಮಾಪಕರು ಒಪ್ಪಿದರೆ ಮಾಜಿ ಪ್ರೇಮಿ ಶಾಹಿದ್ ಜೊತೆ ನಟಿಸಲು ಕರೀನಾ ಸಿದ್ಧವಂತೆ

Webdunia
ಶನಿವಾರ, 27 ಡಿಸೆಂಬರ್ 2014 (10:15 IST)
ಸಾಮಾನ್ಯವಾಗಿ ಬಾಲಿವುಡ್  ಪಟ್ಟಣದಲ್ಲಿ  ಹೆಚ್ಚು ಪ್ರಮಾಣದಲ್ಲಿ ಲೀವಿಂಗ್ ರಿಲೇಶನ್ ಶಿಪ್ ನಡೆಯುತ್ತಿರುತ್ತದೆ. ಕರೀನ ಕಪೂರ್ ಮತ್ತು ಶಾಹಿದ್ ಕಪೂರ್ ವಿಷಯದಲ್ಲೂ ಸಹಿತ ಅದೇ ರೀತಿ ಆಗಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಆ ಜೋಡಿ ಸಹಜೀವನ ನಡೆಸಿದ್ದರು. ಅದಾದ ಬಳಿಕ ಇಬ್ಬರು ಬೇರೆ ಬೇರೆ ಆಗಿದ್ದರು. 
ಅದಾದ ಬಳಿಕ ಶಾಹಿದ್ ಮಿಸ್ಟರ್ ಬ್ಯಾಚುಲರ್ ಆಗಿ ಇದ್ದಾರೆ. ಆದರೆ ಕರೀನ ಸೈಫ್ ಅಲಿ ಖಾನ್ ಜೊತೆ ಲಿವಿನ್  ರಿಲೇಶನ್ ಶಿಪ್ ಬದುಕು ನಡೆಸಿ ಅದಾದ ಬಳಿಕ ಮದುವೆ ಆಗಿ ಅದಾಗಲೇ ಎರಡು ವರ್ಷಗಳು ಪೂರೈಸಿವೆ. ಶಾಹಿದ್ ಮತ್ತು ಕರೀನ ಒಟ್ಟಿಗೆ ನಟಿಸಿದ ಕೊನೆಯ ಚಿತ್ರ ಜಬ್ ವಿ ಮೆಟ್. ಆ ಚಿತ್ರ ಬಾಕ್ಸಾಫೀಸಲ್ಲಿ ಬಂಪರ್ ಫಲಿತಾಂಶ  ನೀಡಿತ್ತು. ಈ ಬಗ್ಗೆ ಮಾತನಾಡುತ್ತ ಮೀಡಿಯ ಮಂದಿ ಅಕಸ್ಮಾತ್ ಆ ಚಿತ್ರದ ಮುಂದುವರೆದ ಭಾಗದಲ್ಲಿ ನಟಿಸುವ ಅವಕಾಶ ಸಿಕ್ಕರೆ ನೀವು ಮತ್ತೆ ಅಭಿನಯಿಸುತ್ತೀರಾ? ಎಂದು ಪ್ರಶ್ನಿಸಿದಾಗ ಆಕೆ ... ನಿರ್ಮಾಪಕರು ಆಸಕ್ತಿ ವಹಿಸಿದರೆ ನನಗೆ ನಟಿಸಲು ಯಾವ ಮುಜುಗರ ಇಲ್ಲ ಎಂದು ಹೇಳಿದ್ದಾಳೆ.
 
ಇದೆ ಪ್ರಶ್ನೆ ಶಾಹಿದ್ ಬಳಿ ಕೇಳಿದಾಗ ಆತ ನೀಡಿದ ಉತ್ತರ ಮಾತ್ರ ಭಿನ್ನವಾಗಿತ್ತು, ಅದೇನೆಂದರೆ.. ಕರೀನಾ ಕಪೂರ್ ಜೊತೆ ನಟಿಸಲು ನನಗೇನು ಅಭ್ಯಂತರವಿಲ್ಲ. ಆ ಚಿತ್ರದ ಮುಂದಿನ ಭಾಗದ ಕಾರಣದಿಂದ ನಾವು ಪುನಃ ಒಂದಾಗುತ್ತಿದ್ದೇವೆ. ಈ ಸುದ್ದಿ ಕರೀನ ಕಿವಿಗೆ ಬಿದ್ದರು ಸಹಿತ ಆಕೆಯ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಶಾಹಿದ್ ತನ್ನ ಮಾಜಿ ಪ್ರೇಮಿಯೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವ ಆಶಯದಲ್ಲಿ ಇದ್ದಾರೆ.. ಅದು ಸಾಧ್ಯವೇ? ಸಮಯ ಎಲ್ಲದಕ್ಕೂ ಉತ್ತರ ನೀಡುತ್ತದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments