Select Your Language

Notifications

webdunia
webdunia
webdunia
webdunia

ಕಪಿಲ್ ಶರ್ಮ ಮುಂದಿನ ಚಿತ್ರಕ್ಕೆ ಎಲ್ಲಿ ಅವ್ರಂ ನಾಯಕಿ

ಕಪಿಲ್ ಶರ್ಮ ಮುಂದಿನ ಚಿತ್ರಕ್ಕೆ ಎಲ್ಲಿ ಅವ್ರಂ  ನಾಯಕಿ
ಬೆಂಗಳೂರು , ಗುರುವಾರ, 25 ಸೆಪ್ಟಂಬರ್ 2014 (14:21 IST)
ಕೇವಲ ಕಿರುತೆರೆಯ ಕಾರ್ಯಕ್ರಮದ ಮೂಲಕ ಜನಮನ ಸೆಳೆದ ಪ್ರತಿಭೆ ಕಪಿಲ್ ಶರ್ಮ. ಅವರ ಕಾಮಿಡಿ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಲವಲವಿಕೆಯ ಪಾತ್ರಗಳು ಜನರನ್ನು ಆಕರ್ಷಿಸಿ ಕಪಿಲ್ ಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬರುವಂತೆ ಮಾಡಿತ್ತು.

ಅವರು ಈಗ ಯಶ್ರಾಜ್  ಫಿಲಿಮ್ಸ್  ಬ್ಯಾಂಕ್ ಚೋರ್ ಚಿತ್ರದಲ್ಲಿ ನಟಿಸಿದ ಬಳಿಕ ಮತ್ತೊಂದು ಚಿತ್ರ ಕೈ ಸೇರಿದೆ. ಅಬ್ಬಾಸ್ ಮಸ್ತಾನಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ ಕಪಿಲ್.
 
ಬಂದಿರುವ ಸುದ್ದಿ ಪ್ರಕಾರ ಕಪಿಲ್ ಜೊತೆಗೆ ಮುದ್ದಾದ ಸುಂದರಿ ಎಲ್ಲಿ ಅವ್ರಂ ಜೋಡಿ ಆಗುತ್ತಿದ್ದಾಳೆ. ತುಂಬಾ ಮುದ್ದು ಮುದ್ದು ಮಾತಿನ ಹುಡುಗಿ ಬಾಲಿವುಡ್ ಮಂದಿಗೆ ಪರಿಚಿತಳಾಗಿದ್ದರೂ  ಸಹಿತ ಹೆಚ್ಚು ಗಮನ ಸೆಳೆದದ್ದು ರಿಯಾಲಿಟಿ ಷೋ ಮೂಲಕ. 
 
ಎಲ್ಲಿಯು ಭಾರತದ ಪಾಪ್ಯುಲರ್ ಷೋ ಬಿಗ್  ಬಾಸ್‌ನ ಸ್ಪರ್ಧಿಯಾಗಿದ್ದಳು. ಆ ರಿಯಾಲಿಟಿ ಷೋ  ಆರನೇ ಆವೃತ್ತಿಯ ಭಾಗವಾಗಿದ್ದಳು ಈ ಚೆಲುವೆ. ಸಲ್ಮಾನ್ ಖಾನ್ ಅವರ ನಿರೂಪಣೆಯ ಪ್ರಸಿದ್ಧ ರಿಯಾಲಿಟಿ ಷೋ ಮೂಲಕ ಹೆಚ್ಚು ಜನಕ್ಕೆ ಗೊತ್ತಾಗಿದ್ದಳು. ಎಲ್ಲಿಯು ಕಪಿಲ್ ಜೊತೆ ನಟಿಸುತ್ತಿರುವ ಚಿತ್ರ ಭಾಗಶಃ ನವೆಂಬರ್ ನಲ್ಲಿ ತನ್ನ ಶೂಟಿಂಗ್ ಆರಂಭ ಮಾಡುತ್ತದೆ ಎನ್ನುವ ಸುದ್ದಿ ಹರಡಿದೆ ಬಾಲಿವುಡ್ ನಲ್ಲಿ!

Share this Story:

Follow Webdunia kannada