ಕಾಂತಾರ ಚಾಪ್ಟರ್ 1 ಚಿತ್ರತಂಡದ ಕಲಾವಿದರಿಗೆ ಅಪಘಾತ: ಬೇಡದ ಕಾರಣಕ್ಕೆ ಮತ್ತೆ ಸುದ್ದಿ

Krishnaveni K
ಸೋಮವಾರ, 25 ನವೆಂಬರ್ 2024 (10:04 IST)
ಉಡುಪಿ: ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ತಂಡ ಮತ್ತೆ ಬೇಡದ ಕಾರಣಕ್ಕೆ ಸುದ್ದಿಯಲ್ಲಿದೆ.  ಸಿನಿಮಾದ ಜ್ಯೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

ಹಾಲ್ಕಲ್ ನ ಆನೆಝರಿ ಎಂಬಲ್ಲಿ ಕಾಂತಾರ 1 ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ಜ್ಯೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಪಲ್ಟಿಯಾಗಿದೆ. ಇದರಿಂದಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕಲಾವಿದರಿಗೆ ಗಾಯಗಳಾಗಿವೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ವೇಳೆ ಬಸ್ ಚಾಲಕ ಮತ್ತು ಪ್ರಯಾಣಿಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿಲ್ಲ. ನಿನ್ನೆ ರಾತ್ರಿ ಅಪಘಾತವಾಗಿದ್ದು ತಕ್ಷಣವೇ ಚಿಕಿತ್ಸೆ ಪಡೆದು ಗಾಯಾಳುಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಕರ್ನಾಟಕದ ಮಾತ್ರವಲ್ಲ, ಪರ ರಾಜ್ಯ ಜ್ಯೂನಿಯರ್ ಕಲಾವಿದರನ್ನೂ ಕರೆಸಲಾಗಿತ್ತು ಈ ಹಿಂದೆ ಜ್ಯೂನಿಯರ್ ಕಲಾವಿದರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಒಂದು ತಿಂಗಳ ಚಿತ್ರೀಕರಣವೆಂದು ನಾಲ್ಕೇ ದಿನಕ್ಕೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಅಪಘಾತದ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments