Webdunia - Bharat's app for daily news and videos

Install App

ಶೀಘ್ರದಲ್ಲೇ ನಿಮ್ಮ ಮುಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ"

Webdunia
ಸೋಮವಾರ, 6 ಮಾರ್ಚ್ 2017 (16:27 IST)
ವಿಭಿನ್ನ ಶೀರ್ಷಿಕೆಯ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರದ ಚಿತ್ರೀಕರಣವು ಈಗ ಬಹುತೇಕ ಸಂಪೂರ್ಣಗೊಂಡಿದೆ. 60 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶ್ರೀರಂಗಪಟ್ಟಣ ಸುತ್ತಮುತ್ತ ಹಲವಾರು ಸನ್ನಿವೇಶಗಳನ್ನು ಜೊತೆಗೆ ಎರಡು ಗೀತೆಗಳನ್ನು ರಿಷಿಕೇಶ್ ಛಾಯಾಗ್ರಹಣದಲ್ಲಿ ನಿರ್ದೇಶಕ ಕುಶಾಲ್ ಚಿತ್ರಿಸಿಕೊಂಡರು.
 
ಐದು ದಿನಗಳ ಕಾಲ ಚಿತ್ರೀಕರಣ ಬಾಕಿ ಉಳಿದಿದ್ದು, ಬರುವ ವಾರದಿಂದ ಮಾತಿನ ಮರುಲೇಪನ ಕಾರ್ಯ ನಡೆಯಲಿದೆ ಎಂದು ನಿರ್ಮಾಪಕ ರಂಜಿತ್‍ಗೌಡ ತಿಳಿಸಿದ್ದಾರೆ. ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಹಣ, ಕುಶಾಲ್, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಸಾಹಿತ್ಯ, ಶ್ರೀಕಾಂತ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರಘುಕುಮಾರ್ ಸಾಹಸ ವೀರಣ್ಣ ನಿರ್ಮಾಣ ನಿರ್ವಹಣೆಯಿದೆ.
 
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಕುಶಾಲ್ ಹೊತ್ತಿದ್ದಾರೆ.  ತಾರಾಗಣದಲ್ಲಿ ಅವಿನಾಶ್, ಕೃಷಿ ಕಪಾಂಡ, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಶ್ರೀನಿವಾಸ ಮೇಷ್ಟ್ರು, ನಾಗರಾಜ್‍ಮೂರ್ತಿ, ಜಯಶ್ರೀ ಎಂ.ಎಸ್. ಉಮೇಶ್, ಸುಚೇಂದ್ರ ಪ್ರಸಾದ್, ಡಾ. ಕಿಂಗ್‍ಮೋಹನ್ ಮುಂತಾದವರಿದ್ದಾರೆ. ಶ್ರೀ ಚಾಮುಂಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಡಿಯಲ್ಲಿ ರಂಜಿತ್‍ಗೌಡ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments