ಯ್ಯೂಟೂಬ್‍ನಲ್ಲಿ ವೈರಲ್ ಆದ ಕನ್ನಡದ ’ತಸ್ಕರ’

Webdunia
ಸೋಮವಾರ, 20 ಫೆಬ್ರವರಿ 2017 (10:55 IST)
ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ತಮ್ಮನ್ನು ತಾವು ಗುರುತಿಸಿಕೊಳ್ಳಲು ಒಂದು ಸುವರ್ಣ ಅವಕಾಶ ಕಿರುಚಿತ್ರ. ತಮ್ಮ ಕೆಲಸದ ಬಗ್ಗೆ ಮತ್ತೊಬ್ಬರಿಗೆ ನಂಬಿಕೆ ಬರುತ್ತದೆ ಎಂದು ಹಲವಾರು ಪ್ರತಿಭೆಗಳು ಈ ಶಾರ್ಟ್ ಫಿಲ್ಮಗಳ ಮೊರೆ ಹೋಗುತ್ತಾರೆ. ಅದು ತಾಂತ್ರಿಕ ವರ್ಗವಾಗಿರಬಹುದು ಅಥವಾ ಕಲೆಗೆ (ನಟನೆ) ಸಂಬಂಧ ಪಟ್ಟದ್ದಾಗಿರಲೂ ಬಹುದು. 
 
ನಮ್ಮ ಸ್ಯಾಂಡಲ್‍ವುಡ್‍ನ ವಿಚಾರಕ್ಕೆ ಬಂದರೆ ಈ ಮುಖೇನ ಹಲವಾರು ಜನ ಹೆಸರು ಮಾಡಿದ್ದಾರೆ. ಇದೆಲ್ಲ ಪೀಠಿಕೆ ಯಾಕೆ ಅಂತಿರಾ? ಕಾರಣವಿದೆ. ಇತ್ತೀಚೆಗಷ್ಟೇ (ಜ. 26 ರಂದು) ಉತ್ಸಾಹಿ ಯುವಕರಿಂದ ತಯಾರಾಗಿದ್ದ ‘ಸ್ಟೋರಿ ಆಫ್ ತಸ್ಕರ’ ಎಂಬ ಕಿರುಚಿತ್ರ ಅಂತರ್ಜಾಲದಲ್ಲಿ ಬಿಡುಗಡೆಯಾಯಿತು. ಅದು ಈಗ ಯ್ಯೂಟೂಬ್‍ನಲ್ಲಿ ವೈರಲ್ ಆಗಿದ್ದು, ರಿಲೀಸ್ ಆದ ಮೂರೇ ವಾರದಲ್ಲಿ 3.5 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ.
 
ಕಿರುಚಿತ್ರವೊಂದಕ್ಕೆ ಇಷ್ಟೊಂದು ಒಳ್ಳೆ ರೆಸ್ಪಾನ್ಸ್ ಬಂದಿದ್ದರಿಂದ ತಂಡ ಖುಷಿಯಲ್ಲಿದೆ. ಅಂದಹಾಗೆ ‘... ತಸ್ಕರ’ ಕಳೆದ ವರ್ಷ ನಿರ್ಮಾಣವಾಗಿದ್ದು, ಒಂದು ವರ್ಷದಲ್ಲಿ ಹಲವಾರು ಶಾರ್ಟ್ ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನ ಕಂಡಿದೆ. ಜತೆಗೆ ಶಿವಮೊಗ್ಗದ ಅಂಬೆಗಾಲು ಕಿರಿಚಿತ್ರ ಸ್ಫರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿದೆ. 23 ನಿಮಿಷದ ಈ ಸಿನಿಮಾದಲ್ಲಿ ಕಳ್ಳನೊಬ್ಬನ ಜೀವನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಯುವ ನಿರ್ದೇಶಕ ದೇವರಾಜ್ ಪೂಜಾರಿ. 
 
ಇವರು ಈಗಾಗಲೆ ಕಿನಾರೆ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಬರುವಂತಹ ಕಿರುಚಿತ್ರಗಳಿಗಿಂತ ‘... ತಸ್ಕರ’ ಸ್ವಲ್ಪ ಡಿಫರೆಂಟ್ ಆಗಿದೆ ಎನ್ನಬಹುದು. ಇದಕ್ಕೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ತಂತಜ್ಞರು ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಚಿತ್ರ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. 
 
ಇದಕ್ಕೆ ಕೀರ್ತನ್ ಪೂಜಾರಿಯವರ ಛಾಯಾಗ್ರಹಣವಿದೆ. ಇವರು ‘96’ ಮತ್ತು ತುಳು ಚಿತ್ರ ‘ಪಿಲ್ಲಿಬೈಲ್ ಯಮುನಕ್ಕ’ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ಜತೆಗೆ ‘ಏನೆಂದು ಹೆಸರಿಡಲಿ’ ಹಾಗೂ ‘ಕಿನಾರೆ’ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಸುರೇಂದ್ರನಾಥ ಸಂಗೀತ ಇದೆ. 
 
ಇವರಂತೆ ಸಂಕಲನಕಾರ ಮೋಹನ ರಂಗಕಹಳೆ ‘ವಿನಾಷಿನಿ’, ‘ಹಳ್ಳಿಕಟ್ಟೆ ಪಂಚಾಯತಿ’, ‘ಬಾಲ್ಕನಿಯ ಬ್ಯೂಟಿ’ ಹಾಗೂ ‘ನಾನು ನಮ್ ಹುಡ್ಗಿ ಖರ್ಚಿಗೊಂದು ಮಾಫಿಯಾ’ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿ.ಎಮ್.ಸಿ ಪ್ರೋಡಕ್ಷನ್ಸ್‌ನ ಮೊದಲ ಕಾಣಿಕೆಯಾಗಿರುವ ಈ ಚಿತ್ರವನ್ನು ಕಿರಣ್ ಹೆಗಡೆ ನಿರ್ಮಾಣ ಮಾಡಿದ್ದು ಮುಖ್ಯ ಪಾತ್ರದಲ್ಲಿ ಪತ್ರಕರ್ತ, ಯುವ ಕಲಾವಿದ ರಾಜೇಶ್ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments